ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಕಾರಿಗಳಿಂದ ಬೆಳಗಾವಿ ಸಂಸದೆ ಮಂಗಲ ಕಚೇರಿ ಎದುರು ಸೋಮವಾರ ಪ್ರತಿಭಟಿಸಲಾಯಿತು.
ರಾಜ್ಯದ ರೈತರನ್ನು ಕಡೆಗಣಿಸಿ ತಮಿಳುನಾಡಿಗೆ ಬಿಟ್ಟಿರುವುದನ್ನು ಕೂಡಲೇ ನಿಲ್ಲಿಸಬೇಕು. ಸಮುದ್ರಕ್ಕೆ ಅನವಶ್ಯಕವಾಗಿ ಹರಿಯುವ ಹೆಚ್ಚುವರಿ ನೀರನ್ನು ಸಂಕಷ್ಟದಲ್ಲಿ ಬಳಸಿಕೊಳ್ಳಲು ಮೇಕೆದಾಟು ಜಲಾಶಯ ಯೋಜನೆ ಕೈಗೆತ್ತಿಕೊಳ್ಳಬೇಕು. ಕಬ್ಬು ಬೆಳೆಗಾರರಿಗೆ ಬರಬೇಕಾದ 2022-23ನೇ ಸಾಲಿನ ಬಾಕಿ ಹಣ ಬಿಡುಗಡೆಗೊಳಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡಬೇಕು. ಕೇಂದ್ರ ಸರ್ಕಾರ ಅಕ್ಕಿ, ಈರುಳ್ಳಿ ರಪ್ತು ನಿಷೇಧ ಮಾಡಿರುವ ನೀತಿ ಕೈಬಿಡಬೇಕು. ಬಗರಹುಕುಂ ಸಾಗುವಳಿದಾರ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಸಂಸದೆ ಮಂಗಲ ಅಂಗಡಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಿದರು. ಬಾಪುಗೌಡ ಪಾಟೀಲ, ಎಸ್.ಬಿ. ಮುಷ್ಠಿಗೇರಿ, ಗುರುಸಿದ್ಧಪ್ಪ ಕೊಟಗಿ, ಮಡಿವಾಳಪ್ಪ ಗಣಾಚಾರಿ, ಈರಪ್ಪ ಎಚ್., ಅಶೋಕ ಪಾಟೀಲ ಇತರರಿದ್ದರು.