ಜಿಲ್ಲೆ

ಸಾಮಾಜಿಕ ಬೆಳವಣಿಗೆಗೆ ಸ್ವಾಮೀಜಿ ಪಾತ್ರ ಹಿರಿದು

ಯಾದವಾಡ: ಸಮಾಜದಲ್ಲಿನ ಅಂಧಕಾರ, ಅಜ್ಞಾನ ದೂರವಾಗಲು ಸ್ವಾಮೀಜಿಗಳ ಪಾತ್ರ ಹಿರಿದಾಗಿದೆ. ಆ ನಿಟ್ಟಿನಲ್ಲಿ ಗ್ರಾಮದ ಚೌಕಿಮಠಕ್ಕೆ ವಿಶ್ವಾರಾಧ್ಯ ಸ್ವಾಮೀಜಿ ಅವರನ್ನು ಉತ್ತರಾಧಿ-ಕಾರಿಯನ್ನಾಗಿ ನೇಮಿಸಿರುವುದು ಮಾದರಿಯಾಗಿದೆ ಎಂದು ಗೋಕಾಕ ಶೂನ್ಯ ಸಂಪಾದನಮಠದ ಮುರುರಾಜೇಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಚೌಕಿಮಠದ ನೂತನ ಉತ್ತರಾಧಿ-ಕಾರಿ ವಿಶ್ವಾರಾಧ್ಯ ಸ್ವಾಮೀಜಿ ಪುರಪ್ರವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮುಂಬರುವ ದಿನಗಳಲ್ಲಿ ಸುಂದರ ಮಠ ನಿರ್ಮಿಸಿ ಮಠದ ಲೋಕಾರ್ಪಣೆಯಲ್ಲಿ ಪೂಜ್ಯರ ಪಟ್ಟಾಭಿಷೇಕ ಮಾಡುವ ಮೂಲಕ ಶ್ರೀಮಠ ಹಾಗೂ ಟ್ಟಗಿ ಬಸವೇಶ್ವರ ದೇವಸ್ಥಾನಕ್ಕಿರುವ ಉತ್ತಮ ಬಾಂಧವ್ಯ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಸುಮಂಗಲೆಯರ ಆರತಿ ಹಾಗೂ ವಿವಿಧ ವಾದ್ಯಮೇಳದೊಂದಿಗೆ ಶ್ರೀ ಚೌಕಿಮಠದ ನೂತನ ಉತ್ತರಾಧಿಕಾರಿ ವಿಶ್ವಾರಾಧ್ಯ ಸ್ವಾಮೀಜಿ ಪುರಪ್ರವೇಶ ಮಾಡಿದರು. ಬಸವಲಿಂಗ ಸ್ವಾಮೀಜಿ, ಗರಗ ಮಡಿವಾಳೇಶ್ವರ ಮಠದ ಉತ್ತರಾಧಿಕಾರಿ ಪ್ರಶಾಂತ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ಕರಬಸಯ್ಯ ಸ್ವಾಮೀಜಿ, ಶಿವಪ್ಪಗೌಡ ನ್ಯಾಮಗೌಡರ, ಗೊಲಪ್ಪ ಕಾಗವಾಡ ಇತರರಿದ್ದರು.