ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದಲ್ಲಿ ಕುರಿಗಾಹಿ ಕುಟುಂಬಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರ್ಥಿಕ ನೆರವು ನೀಡಿದರು. ಯುವರಾಜ ಕದಂ, ಬಾಗಣ್ಣ ನರೋಟಿ ಇದ್ದರು. 
ಜಿಲ್ಲೆ

ಕುರಿಗಾಹಿಗಳಿಗೆ ಆರ್ಥಿಕ ನೆರವು

ಬೆಳಗಾವಿ: ತಾಲೂಕಿನ ವಿವಿಧ ಭಾಗಗಳಲ್ಲಿ ವಿಷಪೂರಿತ ಆಹಾರ ಸೇವಿಸಿ ಕುರಿಗಳು ಸಾವಿಗೀಡಾದ ಘಟನೆಗೆ ತಕ್ಷಣ ಸ್ಪಂದಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ನೆರವು ನೀಡಿದರು. ಸುಳಗಾ ಗ್ರಾಮದ ಪರುಶರಾಮ ಭೀಮಾ ಉಚಗಾಂವಕರ್ ಹಾಗೂ ಯಲ್ಲಪ್ಪ ರಾಮಾ ನರೋಟಿ ಕುಟುಂಬಗಳಿಗೆ ಸೇರಿದ 15 ಕುರಿಗಳು ವಿಷಪೂರಿತ ಸಸ್ಯ ತಿಂದು ಸಾವನ್ನಪ್ಪಿದ್ದವು. ಸುದ್ದಿ ತಿಳಿದು ಅವರ ಮನೆಗಳಿಗೆ ತೆರಳಿದ ಲಕ್ಷ್ಮೀ, ಸಿಎಂ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಬಾಗಣ್ಣ ನರೋಟಿ ಇತರರು ಇದ್ದರು.