ಚಿಕ್ಕೋಡಿಯಲ್ಲಿ ಏರ್ಪಡಿಸಿದ್ದ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ರಾಜು ಪಾಟೀಲ, ಎನ್.ಎಸ್.ಶಿಂಧೆ, ರಾಜು ಪಾಟೀಲ, ಶಿವಾನಂದ ಚೊನ್ನದ ಇತರರಿದ್ದರು. 
ಜಿಲ್ಲೆ

ಆತ್ಮರಕ್ಷಣೆಗೆ ಕರಾಟೆ ಉತ್ತಮ ಆಯ್ಕೆ

ಪ್ರಶಾಂತ ಹೂಗಾರ

ಚಿಕ್ಕೋಡಿ: ಜಿಲ್ಲಾ ರಾಣಿ ಚನ್ನಮ್ಮ ಸೆಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಚಿಕ್ಕೋಡಿ ಪಟ್ಟಣದ ಸಿಎಲ್‌ಇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರಾಟೆ ವಿದ್ಯಾರ್ಥಿಗಳ ಬೆಲ್ಟ್ ಪರೀಕ್ಷೆ ಜರುಗಿತು.

ಮುಖ್ಯ ಅತಿಥಿ ಎನ್.ಎಸ್.ಶಿಂಧೆ ಮಾತನಾಡಿ, ಕರಾಟೆಯು ಆತ್ಮರಕ್ಷಣೆಗೆ ಅತ್ಯುತ್ತಮ ಕ್ರೀಡೆಯಾಗಿದೆ. ಕರಾಟೆಯಿಂದ ಮಾನಸಿಕವಾಗಿಯೂ ಗಟ್ಟಿಯಾಗಲು ಸಾಧ್ಯ ಎಂದರು.

ಜಿಲ್ಲಾ ರಾಣಿ ಚನ್ನಮ್ಮ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ರಾಜು ಪಾಟೀಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಬಹುಮುಖ್ಯ. ಈ ನಿಟ್ಟಿನಲ್ಲಿ ಅಸೋಸಿಯೇಷನ್‌ನಿಂದ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ ಎಂದರು.

ಬೆಲ್ಟ್ ಪರೀಕ್ಷೆಯಲ್ಲಿ ಕಾಗವಾಡ, ಅಥಣಿ, ಚಿಕ್ಕೋಡಿಯ 180 ವಿದ್ಯಾರ್ಥಿಗಳು ಭಾಗವಹಿಸಿದ್ದರು. 170 ವಿದ್ಯಾರ್ಥಿಗಳು ಉತ್ತೀರ್ಣರಾದರು. ಅವರಿಗೆ ಪ್ರಮಾಣಪತ್ರ ಹಾಗೂ ಬೆಲ್ಟ್ ನೀಡಿ ಗೌರವಿಸಲಾಯಿತು.

ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ ಮನೋಜ್ ಕುಮಾರ ರಜಪೂತ, ಸಿಎಲ್‌ಇ ಸಂಸ್ಥೆಯ ನಿರ್ದೇಶಕ ಶಿವಾನಂದ ಚೊನ್ನದ, ಆನಂದ ಶಹಾಪುರೆ, ಮಹಾಂತೇಶ ಕಾಂಬಳೆ, ದತ್ತಾತ್ರೇಯ ಕೋಳಿ, ಅಶೋಕ ಮಾಳಗೆ, ಅನಿಲ ಹೆಗಡೆ, ಕಿರಣ ಭಜಂತ್ರಿ, ಪ್ರಶಾಂತ ಅಗಸರ, ದೀಪಕ ಪಾಟೀಲ, ಅಭಿಷೇಕ ಅನ್ನೂರೆ, ರೋಹಿತ ಮಾಳಿ, ಆದಿತ್ಯ ಪಾಟೀಲ, ಪ್ರಜ್ವಲ ಕಾಂಬಳೆ, ಕಾರ್ತಿಕ ಅರವಾಡೆ, ವೇದಿಕಾ ಜಾಧವ ಇತರರಿದ್ದರು.