ಬೆಲ್ಲದ ಬಾಗೇವಾಡಿ ಭರತೇಶ ಪ್ರೌಢಶಾಲೆ ಆವರಣದಲ್ಲಿ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಗಣ್ಯರು ಉದ್ಘಾಟಿಸಿದರು. ಡಿ.ಟಿ.ದೇಸಾಯಿ, ಬಿ.ಆರ್.ಕುಂಬಾರ, ಪವನ ಕತ್ತಿ, ಡಿ.ಡಿ.ದೇಸಾಯಿ ಶಿವು ಬಾಗೇವಾಡಿ, ಡಾ.ಸೂರಜ್ ಮುನ್ನೋಳಿ ಇತರರು ಇದ್ದರು. 
ಜಿಲ್ಲೆ

ಶಾಲೆಗೆ ಶುದ್ಧ ನೀರಿನ ಘಟಕ ದೇಣಿಗೆ

ಪ್ರಶಾಂತ ಹೂಗಾರ

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿ ಗುರುಕುಲದ ಭರತೇಶ ಪ್ರೌಢಶಾಲೆ ಆವರಣದಲ್ಲಿ ಪ್ರೌಢಶಾಲೆಯ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಭಾನುವಾರ ಜರುಗಿತು.

ಡಿ.ಟಿ.ದೇಸಾಯಿ, ಬಿ.ಆರ್.ಕುಂಬಾರ ಸೇರಿ 35 ಶಿಕ್ಷಕರನ್ನು ವಿದ್ಯಾರ್ಥಿಗಳು ಸತ್ಕರಿಸಿದರು. ಹಳೆಯ ವಿದ್ಯಾರ್ಥಿಗಳಾದ ವಕೀಲ ಉದಯ ದೇಸಾಯಿ, ಅರಣ್ಯಾಧಿಕಾರಿ ಪಾಂಡುರಂಗ ಲಾಳಗೆ, ಪಂಚಾಯತ್ ರಾಜ್ ಇಲಾಖೆಯ ದೇವೇಂದ್ರ ಕಿವಡಗಿ, ಡಾ.ಸೂರಜ್ ಮುನ್ನೋಳಿ ಅನಿಸಿಕೆ ಹಂಚಿಕೊಂಡರು.

ಶಾಲೆಗೆ ಶುದ್ಧ ನೀರಿನ ಘಟಕ ದೇಣಿಗೆ ನೀಡಲಾಯಿತು. ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ, ಭರತೇಶ ಪಿಯು ಕಾಲೇಜಿನ ಪ್ರಾಚಾರ್ಯ ಡಿ.ಡಿ.ದೇಸಾಯಿ, 2002-03 ಸಾಲಿನ ವಿದ್ಯಾರ್ಥಿಗಳಾದ ಶಿವು ಬಾಗೇವಾಡಿ, ಆನಂದ, ಉಮೇಶ, ಶೈಲಜಾ ಕೊಕರೆ, ರಮೇಶ ಮಂಗಿ ಇತರರು ಇದ್ದರು.