ಜಿಲ್ಲೆ

ಗ್ರಾಮಾಭಿವೃದ್ಧಿ ಹೊಂದಲು ಜನರ ಒಡನಾಟ ಅವಶ್ಯ

ಚನ್ನಮ್ಮನ ಕಿತ್ತೂರು: ಯಾವುದೇ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳು ಅಭಿವದ್ಧಿ ಹೊಂದಬೇಕಾದರೆ ಗ್ರಾಮೀಣ ಭಾಗದ ಜನರ ಜತೆಗೆ ಓಡಾಟ ಹಾಗೂ ಒಡನಾಟ ತುಂಬ ಅವಶ್ಯ. ಹಳ್ಳಿಗರಿಗೆ ಅವಶ್ಯವಿರುವ ಗುಣಮಟ್ಟದ ರಸ್ತೆ ನಿರ್ಮಿಸಿದಲ್ಲಿ ಉತ್ಪನ್ನ ಸಾಗಿಸಲು ಅನುಕೂಲವಾಗುತ್ತದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ತಾಲೂಕಿನ ಹೊನ್ನಿದಿಬ್ಬ ಹಾಗೂ ನಿಚ್ಚಣಕಿ ಗ್ರಾಮಗಳಲ್ಲಿ ಕರ್ನಾಟಕ ಭೂಸೇನಾ ನಿಗಮದ 70 ಲ ರೂ. ಹಾಗೂ ಪಂಚಾಯತ್​ ರಾಜ್​ ಇಲಾಖೆಯ 20 ಲ ರೂ. ಅನುದಾನದಲ್ಲಿ ಕಾಂಕ್ರಿಟ್​ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಒಳ್ಳೆಯ ರಸ್ತೆ ಸೌಕರ್ಯದಿಂದ ಅಪಘಾತಗಳನ್ನು ತಡೆಯಬಹುದಾಗಿದೆ. ಸಾರ್ವಜನಿಕರು, ಶಾಲಾ&ಕಾಲೇಜು ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗುತ್ತದೆ. ರಸ್ತೆಗಳ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.

ತಾಪಂ ಇಒ ಕಿರಣ ೂರ್ಪಡೆ, ಬಿಇಒ ಚನ್ನಬಸಪ್ಪ ತುಬಾಕದ, ಕಿರಿಯ ಇಂಜಿನಿಯರ್​ ಆರ್​.ಆರ್​. ಬಡಿಗೇರ, ಮುಖಂಡರಾದ ಆಶ್ಪಾಕ್​ ಹವಾಲ್ದಾರ್​, ಕಿರಣ ವಾಳದ , ಸುರೇಶ ಹುಲಿಕಟ್ಟಿ, ಶಂಕರ ಆಯಟ್ಟಿ, ರಮೇಶ ವರಗಣ್ಣವರ, ಶಂಕರಗೌಡ ಪಾಟೀಲ, ಮಡಿವಾಳಪ್ಪ ಭೋಸಲೆ ಇತರರಿದ್ದರು.