ಸಿರಿಗೇರಿ ವಿವೇಕಾನಂದ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಸಿ ನೆಡಲಾಯಿತು. ತಾಲೂಕು ಕೃಷಿ ಮೇಲ್ವಿಚಾರಕ ವೀರೇಶ, ಮುಖ್ಯಶಿಕ್ಷಕ ಎನ್. ಪಂಪಾಪತಿ, ಶಿಕ್ಷಕರಾದ ಎನ್. ಪಂಪಾಪತಿ, ಶಿವಪ್ಪ, ಶಿವಕುಮಾರ್, ಮಹಾಬಲೇಶ್ವರ ಇತರರಿದ್ದರು.ಕೂಡ್ಲಿಗಿ ರಾಜೀವ್ ಗಾಂಧಿ ನಗರದಲ್ಲಿನ ವ್ಯಾಯಾಮ ಶಾಲೆಗೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್ ಭೇಟಿ ನೀಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಮಾದಿಹಳ್ಳಿ ನಜೀರ್, ಎಚ್.ವೀರಭದ್ರಪ್ಪ, ಬಾಷಾ ಸಾಬ್, ರಿಯಾಜ್ ಇತರರಿದ್ದರು. 
ಜಿಲ್ಲೆ

ಗ್ರಾಮೀಣ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ

ರುದ್ರಪ್ಪ ವಾಲಿ

ಸಿರಿಗೇರಿ: ಸ್ಥಳೀಯ ವಿವೇಕಾನಂದ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಿಶ್ವ ಪರಿಸರದಿನ ಅಂಗವಾಗಿ ಗುರುವಾರ ಪರಿಸರ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಲೂಕು ಕೃಷಿ ಮೇಲ್ವಿಚಾರಕ ವೀರೇಶ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ವೀರೇಂದ್ರ ಹೆಗ್ಗಡೆ ದಂಪತಿ ವಿವಿಧ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸುತ್ತಿದ್ದಾರೆ. ಗುಡ್ಡಗಳಲ್ಲಿ ಸಸಿ ನೆಡುವುದು, ಬೀಜದ ಉಂಡೆಗಳನ್ನು ತಯಾರಿಸಿ ವಿತರಿಸುವುದು, ಜ್ಞಾನದೀಪ ಯೋಜನೆಯಡಿ ಶಿಕ್ಷಕರ ನಿಯೋಜನೆ, ಎಸ್ಸೆಸ್ಸೆಲ್ಸಿ ನಂತರದ ವಿದ್ಯಾಭ್ಯಾಸ ಕುರಿತು ಮಾಹಿತಿ ನೀಡುವ ಸೆಮಿನಾರ್ ಆಯೋಜನೆ, ಹದಿ ಹರೆಯದ ಹೆಣ್ಣುಮಕ್ಕಳಿಗೆ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾಹಿತಿ ನೀಡುವುದು, ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿಯಡಿ ವಿದ್ಯಾರ್ಥಿ ವೇತನ ನೀಡುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ವಲಯ ಮೇಲ್ವಿಚಾರಕ ಶಿವಪ್ಪ ಮಾತನಾಡಿ, ಮರಗಳು ಹೆಚ್ಚಾದಷ್ಟು ನಮ್ಮ ಜೀವನ ಸಮೃದ್ಧವಾಗಿರುತ್ತದೆ. ವಿದ್ಯಾರ್ಥಿಗಳು ಈಗಿನ ತಂತ್ರಜ್ಞಾನ ಅರಿತುಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು. ಸಂಸ್ಥೆಯ ವಿ.ಎಲ್ ಐಶ್ವರ್ಯ, ಲಿಂಗನಗೌಡ, ಶಿಕ್ಷಕರಾದ ಶಿವಕುಮಾರ್, ಮಹಾಬಲೇಶ್ವರ, ರಂಜಿತ್ ಕುಮಾರ್ ಇತರರಿದ್ದರು.