ಜಿಲ್ಲೆ

ಮೀಸಲಾತಿಗೆ ಪ್ರಾಮಾಣಿಕ ಪ್ರಯತ್ನ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಬಣಜಿಗ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಸರ್ಕಾರಿ ಉದ್ಯೋಗದಲ್ಲಿಯೂ ಸಮುದಾಯದ ವಿದ್ಯಾರ್ಥಿಗಳಿಗೆ 2ಎ ಮೀಸಲಾತಿ ನೀಡಬೇಕೆಂದು ನ್ಯಾಯಾಲಯದ ಆದೇಶವಾಗಿದೆ. ಹೀಗಾಗಿ, ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಸಂಸದ ಜಗದೀಶ ಶೆಟ್ಟರ ಹೇಳಿದರು.

ಪಟ್ಟಣದ ಹಲಗತ್ತಿ ಬೈಪಾಸ್​ ರಸ್ತೆಯ ಬಸವ ಗಾರ್ಡನ್​ನಲ್ಲಿ ಬಣಜಿಗ ೇಮಾಭಿವೃದ್ಧಿ ಸಂದ ತಾಲೂಕು ಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವಿಧಾನಸಭಾ ೇತ್ರದಲ್ಲಿ ಸಮುದಾಯದ ನಿಖರ ಅಂಕಿ&ಅಂಶ ದೊರೆಯಲು ಸಮೀೆ ಕೈಗೊಳ್ಳಬೇಕು. ಅಂದಾಗ ಎಲ್ಲರನ್ನು ತಲುಪಲು ಸಹಕಾರಿಯಾಗುತ್ತದೆ. ಸರ್ಕಾರದ ಜನಗಣತಿ ಸಂದರ್ಭದಲ್ಲಿ ಸಮುದಾಯದ ಜನರು ಜಾತಿ ಕಾಲಂನಲ್ಲಿ ಸರಿಯಾದ ದಾಖಲೆ ಬರೆಯಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಅಶೋಕ ಪಟ್ಟಣ ಮಾತನಾಡಿ, ಮುಖ್ಯಮಂತ್ರಿಗಳಿಂದ ೇತ್ರಕ್ಕೆ 20 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಅದರಲ್ಲಿ ಲಿಂಗಾಯತ ರುದ್ರಭೂಮಿ ಅಭಿವೃದ್ಧಿಗೆ 1 ಕೋಟಿ ರೂ. ಹಾಗೂ ಲಿಂಗಾಯತ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಮೀಸಲಿರಿಸಿದೆ. ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ವ್ಯಾಪಾರವನ್ನು ವೃತ್ತಿಯಾಗಿಸಿಕೊಂಡ ಬಣಜಿಗ ಸಮುದಾಯದ ವಿರಕ್ತಮಠಗಳ ಅಭಿವೃದ್ಧಿಗೆ ಶ್ರಮಿಸಿದೆ. ಲಿಂಗಾಯತರು ಒಗ್ಗಟ್ಟಾಗಬೇಕು ಎಂದರು.

ಸಮುದಾಯದ ಮುಖಂಡ ಮಲ್ಲಿಕಾರ್ಜುನ ರೂಡಗಿ, ಧನಲ$್ಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಮಲ್ಲಣ್ಣ ಯಾದವಾಡ, ಶಶಿಧರ ಮಾಳವಾಡ, ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಮಾತನಾಡಿದರು.

ಕಟಕೋಳ ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ಗುರುಸಿದ್ದಪ್ಪ ಮುತ್ತೂರ, ಯುವ ಟಕದ ಅಧ್ಯ ಸಂಜಯ ಆರಿಬೆಂಚಿ, ಕಾರ್ಯಾದ್ಯ ಶಿವಾನಂದ ಬರದೇಲಿ, ಮಹಿಳಾ ಟಕದ ಅಧ್ಯೆ ಪ್ರಭಾವತಿ ಪುಟಾಣಿ, ನೂತನ ಕಾರ್ಯಾಧ್ಯ ಪ್ರೊ.ಎಸ್​.ಎಂ ಸಕ್ರಿ, ಈರಣ್ಣ ಕಲ್ಯಾಣಿ, ಶ್ರೇಯಸ್​ ಜಾಬಶೆಟ್ಟಿ ಇತರರಿದ್ದರು. ದಿವ್ಯಾ ಬಟಕುರ್ಕಿ ನಿರೂಪಿಸಿದರು. ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ರಮೇಶ ಬಿಕ್ಕನ್ನವರ ವಂದಿಸಿದರು.

ಸವದತ್ತಿ ಯಲ್ಲಮ್ಮ ೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 100 ಕೋಟಿ ರೂ. ಅನುದಾನ ಮಂಜೂರಾಗಿದೆ. ಶಬರಿಕೊಳ್ಳದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸೂಕ್ತ ಯೋಜನೆ ಸಿದ್ಧಪಡಿಸಿ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಭಾಗದ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

> ಜಗದೀಶ ಶೆಟ್ಟರ ಸಂಸದ