ಎಲಿಮುನ್ನೋಳಿ ಗ್ರಾಮದಲ್ಲಿ ಲಕ್ಷ್ಮೀ ದೇವಸ್ಥಾನದ ಭಕ್ತರು ವಿಪ ಸದಸ್ಯ ಲಖನ್ ಜಾರಕಿಹೊಳಿ ಅವರನ್ನು ಸತ್ಕರಿಸಿದರು. ರೋಹಿತ್ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಜಿನಗೌಡ ಇಮಗೌಡನವರ ಇತರರಿದ್ದರು. 
ಜಿಲ್ಲೆ

ಗುಣಮಟ್ಟಕ್ಕೆ ಆದ್ಯತೆ ಇರಲಿ

ಪ್ರಶಾಂತ ಹೂಗಾರ

ಹುಕ್ಕೇರಿ: ಜಾರಕಿಹೊಳಿ ಮನೆತನ ಮೊದಲಿನಿಂದಲೂ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡುತ್ತ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.

ತಾಲೂಕಿನ ಎಲಿಮುನ್ನೋಳಿ ಗ್ರಾಮದ ಲಕ್ಷ್ಮೀ ದೇವಸ್ಥಾನದ ಸದ್ಭಕ್ತರು ಮಂಗಳವಾರ ಹಮ್ಮಿಕೊಂಡಿದ್ದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಎಲಿಮುನ್ನೋಳಿ ಮತ್ತು ಹೆಬ್ಬಾಳ ಗ್ರಾಮದಲ್ಲಿ ಸಮುದಾಯ ಭವನ ಕಾಮಗಾರಿಗೆ 2023-24ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಲಾ 5 ಲಕ್ಷ ರೂ. ಗಳಂತೆ 10 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿರುವೆ. ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸುವ ಜತೆಗೆ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಮುಖಂಡರಾದ ರೋಹಿತ್ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಜಿನಗೌಡ ಇಮಗೌಡನವರ, ಕಲಗೌಡ ಮಲಗೌಡನವರ, ಅಶೋಕ ಮಲಗೌಡನವರ, ಮಹೇಂದ್ರ ಮಲಗೌಡನವರ, ಅಪ್ಪಾಸಾಹೇಬ ಇಮಗೌಡನವರ, ಭರತೇಶ ಮಲಗೌಡನವರ ಇತರರಿದ್ದರು.