ಜಿಲ್ಲೆ

ಜನಪರ ಕಾರ್ಯಗಳಿಗೆ ಮೊದಲ ಆದ್ಯತೆ

ಸೋಮಲಿಂಗ ತಳವಾರ

ಬೆನಕಟ್ಟಿ: ಬೆನಕಟ್ಟಿ&ಚುಂಚನೂರ 1.5 ಕಿಮೀ ಉದ್ದದ ರಸ್ತೆಗೆ 1.ಕೋಟಿ ರೂ. ವೆಚ್ಚದ ಕಾಂಕ್ರೀಟ್​ ಹಾಗೂ ಡಾಂಬರೀಕರಣ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಗ್ರಾಮದಲ್ಲಿನ ದುರ್ಗಾದೇವಿ ದೇವಸ್ಥಾನದ ವಿವಾಹ ಮಹೋತ್ಸವ ಜರುಗುವ ಸ್ಥಳ ಅಭಿವೃದ್ಧಿ ಹಾಗೂ ಪಕ್ಕದ ಹಳೆಯ ಬಾವಿ ಮುಚ್ಚಿಸುವಂತೆ ಗ್ರಾಮಸ್ಥರು ಶಾಸಕ ವೈದ್ಯ ಅವರಿಗೆ ಮನವಿ ಮಾಡಿದರು. ವಿವಾಹ ಜರುಗುವ ಸ್ಥಳದಲ್ಲಿ ನೆಲ ಹಾಸು ಇಟ್ಟಿಗೆ ಜೋಡಿಸುವುದು, ದುರ್ಗಾದೇವಿ ದೇವಸ್ಥಾನ ಆವರಣದಲ್ಲಿನ ಹಳೇ ಬಾವಿಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದಾಗಿ ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.

ತಹಸೀಲ್ದ್ದಾರ್​ ಎಂ.ಎನ್​.ಹೆಗ್ಗನ್ನವರ, ತಾಪಂ ಮಾಜಿ ಸದಸ್ಯ ರುದ್ರಪ್ಪ ರೇವನ್ನವರ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಮಹಾಂತೇಶ ಉಪ್ಪಿನ, ಶ್ರೀಶೈಲ ಕುಸಲಿ, ಬಿ.ಆರ್​.ಮರ್ಚಪ್ಪನ್ನವರ, ಪ್ರಕಾಶ ಸಾವಳಗಿ, ಡಿ.ಡಿ.ಟೂಪೂಜಿ, ಗದಿಗೆಪ್ಪ ವೀರಶೆಟ್ಟಿ, ಪುಂಡಲೀಕ ಮರ್ದನ್ನವರ, ಸಿದ್ದಾರೂಢ ಚೂರಿ, ಮಾಯಪ್ಪ ಕುರಿ, ಪತ್ರೆಪ್ಪ ಜಲಗೇರಿ, ರುದ್ರಪ್ಪ ಹಣಮಂತಿ, ಮಲ್ಲಿಕಾರ್ಜುನ ಲಕ್ಕಪ್ಪನ್ನವರ, ಅಡಿವೆಪ್ಪ ವೀರಶೆಟ್ಟಿ, ತೇಮರಾಜ ಗುಡಮಕೇರಿ, ಈರಣ್ಣ ಬಿಷ್ಟಣವರ, ಗಿರೀಶ ಜಕಬಾಳ, ಬಸಪ್ಪ ಜಲಗೇರಿ, ಭೀಮಪ್ಪ ಹೊನಕುಪ್ಪಿ, ಎಇಇ ಎಚ್​.ಎ ಕದ್ರಾಪುರ ಇತರರಿದ್ದರು.