ತೋಲಗಿ ಗ್ರಾಮದಲ್ಲಿ ವಿವಿಧೋದ್ದೇಶ ಪಿಕೆಪಿಎಸ್ ಕಟ್ಟಡ ಉದ್ಘಾಟಿಸಲಾಯಿತು. ಅರವಿಂದ ಪಾಟೀಲ, ಶ್ರೀಕಾಂತ ಪಾಟೀಲ, ಚನ್ನಬಸವ ದೇವರು, ರಮೇಶ ಕೋಟಗಿ ಇತರರಿದ್ದರು. 
ಜಿಲ್ಲೆ

ಪ್ರಗತಿಗೆ ಪ್ರಾಮಾಣಿಕ ಸೇವೆ ಅಗತ್ಯ

ರಾಘವೇಂದ್ರಗೌಡ ಭೀ ಪಾಟೀಲ್

ಇಟಗಿ: ಸಹಕಾರಿ ಸಂಘದ ಪ್ರಗತಿಗೆ ಆಡಳಿತ ಮಂಡಳಿ ಪ್ರಾಮಾಣಿಕ ಸೇವೆ ಅಗತ್ಯ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಹೇಳಿದರು.

ಇಟಗಿ ಸಮೀಪದ ತೋಲಗಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘದ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್‌ನಿಂದ ಖಾನಾಪುರ ತಾಲೂಕಿಗೆ 188 ಕೋಟಿ ರೂ. ಸಾಲ ವಿತರಿಸಲಾಗಿದೆ. ರೈತರು ಸರ್ಕಾರದ ಶೂನ್ಯ ಬಡ್ಡಿ ಸಾಲ ಸೇರಿ ವಿವಿಧ ಯೋಜನೆಗಳ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.

ಸಹಕಾರಿ ಅಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ, ತೋಲಗಿ, ಕಡತನ ಬಾಗೇವಾಡಿ ಹಾಗೂ ಮುಗಳಿಹಾಳ ಗ್ರಾಮಗಳ ಆರ್ಥಿಕ ಅಭಿವದ್ಧಿ ಕೇಂದ್ರವಾಗಿರುವ ಸಂಘವು ಎಲ್ಲರ ಸಹಕಾರದಿಂದ ಪ್ರಗತಿಪಥದಲ್ಲಿದೆ. ಸಂಘದ ವ್ಯವಹಾರಗಳಲ್ಲಿ ಗಣಕೀಕತ ವ್ಯವಸ್ಥೆಯಿದೆ ಎಂದು ತಿಳಿಸಿದರು.

ಬಿಳಕಿ-ಅವರೊಳ್ಳಿ ಚನ್ನಬಸವ ದೇವರು ಮಾತನಾಡಿ, ಸಹಕಾರಿ ಸಂಘಗಳು ರೈತರ ಜೀವ ನಾಡಿಯಾಗಿದ್ದು, ಪ್ರಗತಿಗೆ ಶ್ರಮಿಸುತ್ತವೆ ಎಂದರು.

ಕಾದರವಳ್ಳಿ ಸೀಮಿಮಠದ ಡಾ.ಪಾಲಾಕ್ಷ ಶಿವಯೋಗಿಶ್ವರ ಮಾತನಾಡಿ, ಸೇವಾ ಮನೋಭಾವ ಬೆಳೆದಾಗ ಮಾತ್ರ ಸಹಕಾರಿ ಕ್ಷೇತ್ರ ಪ್ರಗತಿ ಹೊಂದಲಿದೆ ಎಂದು ಹೇಳಿದರು. ಬಸನಗೌಡ ಪಾಟೀಲ, ರಮೇಶಗೌಡ ಪಾಟೀಲ ಮಾತನಾಡಿದರು. ತಾಲೂಕಿನ ಸಹಕಾರಿ ಸಂಘಗಳ ಪ್ರತಿನಿಧಿಗಳನ್ನು ಸತ್ಕರಿಸಲಾಯಿತು.

ಶಾಸಕ ವಿಠ್ಠಲ ಹಲಗೇಕರ, ಸಂಜೀವ ಸೋನಪ್ಪನವರ, ಮಹಾಂತೇಶ ರಾಹುತ, ಜಗದೀಶ ಹೊಸಮನಿ, ಮಾರುತಿ ಠಕ್ಕೇಕರ, ಬಸವರಾಜ ಸಾಣಿಕೊಪ್ಪ, ಸುರೇಶ ಕಾಂಬಳೆ, ಸಹಕಾರಿ ಉಪಾಧ್ಯಕ್ಷ ರಮೇಶ ಕೋಟಗಿ, ನಿರ್ದೇಶಕರಾದ ನಾಗಪ್ಪ ಗಾರಶನ್ನವರ, ಬಾಬು ಬಾಗೇವಾಡಿ, ಜ್ಯೋತಿಬಾ ಪಾಟೀಲ, ದೇವಪ್ಪ ಗೂರನವರ, ಅಹಿಲ್ಯಾ ಸಾವಂತ, ಕಾರ್ಯದರ್ಶಿ ಮಧು ಕಂಗಾಳಿ, ವಿವೇಕ ಕುರಗುಂದ, ವಿಶ್ವನಾಥ ಚಿಕ್ಕಮಠ ಇತರರು ಇದ್ದರು.