filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: portrait;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 50; 
ಜಿಲ್ಲೆ

ಪಿಡಿಒ ಬದಲಾವಣೆಗೆ ಆಗ್ರಹ

ಕಾಗವಾಡ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬದಲಾವಣೆ ಸೇರಿ ಇತರ ಬೇಡಿಕೆಗೆ ಆಗ್ರಹಿಸಿ ತಾಲೂಕಿನ ಉಗಾರ ಬುದ್ರ್ರುಕ್ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಬೀಗ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ಉಪಾಧ್ಯಕ್ಷ ಅಮೀನ್ ಶೇಖ್ ಹಾಗೂ ಸದಸ್ಯ ಅಣ್ಣಾಗೌಡ ಪಾಟೀಲ ಮಾತನಾಡಿ, ಕಳೆದ ಎರಡೂವರೆ ವರ್ಷದಿಂದ ಇಲ್ಲಿಯ ಪಿಡಿಒ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವೇಳೆಗೆ ಸರಿಯಾಗಿ ಪಂಚಾಯಿತಿಗೆ ಆಗಮಿಸುತ್ತಿಲ್ಲ. ಗಣರಾಜೋತ್ಸವ ದಿನದಂದು ಕಾರ್ಯಾಲಯಕ್ಕೆ ಗೈರಾಗಿದ್ದಾರೆ. ಗ್ರಾಮಸ್ಥರ ಕೆಲಸಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಕೂಡಲೇ ಅವರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.

ತಾಪಂ ಇಒ ವೀರಣ್ಣ ವಾಲಿ ಸ್ಥಳಕ್ಕಾಗಮಿಸಿ ಮಾತನಾಡಿ, ನಿಮ್ಮ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿದರು. ಆದರೆ, ಪ್ರತಿಭಟನಾಕಾರು ಅದಕ್ಕೆ ಜಗ್ಗದೇ ಪ್ರತಿಭಟನೆ ಮುಂದುವರೆಸಿದರು.

ಗ್ರಾಪಂ ಸದಸ್ಯರಾದ ಮುನಾಫ್ ಚೌಧರಿ, ಸುನಂದಾ ಸನದಿ, ನಜೀರ ಪಠಾಣ, ಸಾಗರ ಪೂಜಾರಿ, ರಾಹುಲ ಭೋಸಲೆ, ಉಜ್ವಲಾ ಚೌಗುಲೆ, ಶ್ರಾವವ ಗೊಂಧಳೆ, ಪ್ರಶಾಂತ ವಸವಾಡೆ, ದಿಲಾವರ ನೇಜಕರ, ಸಾಗರ ಪೂಜಾರಿ, ರವಿ ಕಮತೆ, ಮನೋಜ ಕುಸನಾಳೆ, ಸುರೇಶ ಪರಮಾಜೆ ಇತರರಿದ್ದರು.