ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಮುದಗಲ್‌ನಲ್ಲಿ ಬಿಜೆಪಿ ಘಟಕದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಸಿ ನೆಡಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಹುಲ್ಲೇಶ ಸಾಹುಕಾರ, ನಗರ ಘಟಕದ ಅಧ್ಯಕ್ಷ ಕರಿಯಪ್ಪ ಯಾದವ್, ಮಹಿಳಾ ಘಟಕದ ಅಧ್ಯಕ್ಷೆ ಸತ್ಯಮ್ಮ ಇತರರಿದ್ದರು. 
ಜಿಲ್ಲೆ

ರೋಗಿಗಳಿಗೆ ಹಾಲು-ಹಣ್ಣು ವಿತರಣೆ

ರುದ್ರಪ್ಪ ವಾಲಿ

ಮುದಗಲ್: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮದಿನದ ಪ್ರಯುಕ್ತ ಮುದಗಲ್ ಬಿಜೆಪಿ ಘಟಕದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಾಲು, ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು. 30 ಕ್ಕೂ ಹೆಚ್ಚು ರೋಗಿಗಳಿಗೆ ಹಾಲು, ಬ್ರೆಡ್ ಮತ್ತು ಹಣ್ಣು ವಿತರಿಸಿದ ನಂತರ ಸಸಿ ನೆಟ್ಟು ಪ್ರಧಾನಿ ಮೋದಿ ಪರವಾಗಿ ಘೋಷಣೆ ಕೂಗಲಾಯಿತು. ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ಬಾಬು ಉಪ್ಪಾರ, ಮುಖಂಡರಾದ ಸಣ್ಣ ಸಿದ್ದಯ್ಯ ಮೇಗಳಪೇಟೆ, ಫಕೀರಪ್ಪ ಮೇಗಳಪೇಟೆ, ನಾಗರಾಜ ತಳವಾರ, ಹೇಮಂತ ನಾಗಲಾಪೂರ, ಮಂಜುನಾಥ, ನವಭಾರತ ಹಿಂದು ದಲಿತ ಸಂಘದ ಅಧ್ಯಕ್ಷ ರವಿ ಕಟ್ಟಿಮನಿ, ಗದ್ದೆಪ್ಪ ಹಡಪದ, ಲಕ್ಷ್ಮೀ ಕೋರಿಶೆಟ್ಟಿ, ಶರಣಪ್ಪ, ಚಂದಾವಲಿಸಾಬ, ಶರಣಪ್ಪ ನಾಯ್ಕ ಇತರರಿದ್ದರು.