ಜಿಲ್ಲೆ

ಜಿಲ್ಲಾದ್ಯಂತ ಸಾರ್ವತ್ರಿಕ ಸಮೀಕ್ಷೆ 12ರಿಂದ

ಯಾದಗಿರಿ: ಕರೊನಾ ವೈರಸ್ ನಿಯಂತ್ರಣ ಸಂಬಂಧ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತ್ತು ಶಿಕ್ಷಕರಿಂದ ಹೆಲ್ತ್ ವಾಚ್ ಆ್ಯಪ್ ಮೂಲಕ 12ರಿಂದ 16ರವರೆಗೆ ಜಿಲ್ಲೆಯ ಎಲ್ಲ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನ ಅಧಿಕಾರಿಗಳಿಗಾಗಿ ಜಿಲ್ಲಾಡಳಿತ ಭವನ ಆಡಿಟೋರಿಯಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೆಲ್ತ್ ವಾಚ್ ಆ್ಯಪ್ ತರಬೇತಿ ಕಾಯರ್ಾಗಾರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಐಎಲ್ಐ, ಸ್ಯಾರಿ ಇತರ ತೀವ್ರ ರೀತಿಯ ಆರೋಗ್ಯ ಸಮಸ್ಯೆ ಹೊಂದಿರುವ ರೋಗಿಗಳನ್ನು ಮುಂಚಿತವಾಗಿ ಗುರುತಿಸಿ ಕೋವಿಡ್-19 ಸೋಂಕಿನಿಂದ ಸಂಭವನೀಯ ವೈದ್ಯಕೀಯ ಸಂಕೀರ್ಣತೆಯಿಂದ ರಕ್ಷಿಸಲು ಜಿಲ್ಲೆಯಲ್ಲಿ ಸಾರ್ವತ್ರಿಕ ಸಮೀಕ್ಷೆ ಮಾಡಬೇಕಾಗಿದೆ ಎಂದರು.

ಸಮೀಕ್ಷೆಯಲ್ಲಿ ಸಂಗ್ರಹಿಸುವ ಮಾಹಿತಿಯನ್ನು ನೇರವಾಗಿ ಅಪ್ಲೋಡ್ ಮಾಡಲು ಹೆಲ್ತ್ ವಾಚ್ ಆ್ಯಪ್ ಸಹ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆ ಮತದಾರರ ಪಟ್ಟಿ ಆಧರಿಸಿ ಪ್ರತಿ ಮತಗಟ್ಟೆ ಅಧಿಕಾರಿ ವ್ಯಾಪ್ತಿಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಐದು ದಿನದಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಕಡ್ಡಾಯವಾಗಿ ತಮ್ಮ ಕ್ಲಸ್ಟರ್ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಬಿಎಲ್ಒ ಮತ್ತು ಶಿಕ್ಷಕರಿಗೆ ಆ್ಯಪ್ ಬಗ್ಗೆ 9ರಿಂಂದ 11ರೊಳಗೆ ತರಬೇತಿ ನೀಡಬೇಕು. ಬಿಎಲ್ಒ ಮತ್ತು ಶಿಕ್ಷಕರು 12ರಿಂದ 16ರೊಳಗೆ ಕುಟುಂಬ ಸಮೀಕ್ಷಾ ಕಾರ್ಯ ಕೈಗೊಂಡು ಅಂದೇ ದತ್ತಾಂಶ ಪೂರ್ಣಗೊಳಿಸುವಂತೆ ನಿದರ್ೇಶನ ನೀಡಿದರು.

ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿ ಕೆಲಸವನ್ನು ತ್ವರಿತವಾಗಿ ಮುಗಿಸಲು ಹೆಚ್ಚುವರಿಯಾಗಿ ಒಬ್ಬ ಶಿಕ್ಷಕರನ್ನು ನೇಮಿಸಲಾಗಿದೆ. ಮತಗಟ್ಟೆವಾರು ಸಂಗ್ರಹಿಸಿದ ಮಾಹಿತಿಯನ್ನು ನೇರವಾಗಿ ಆ್ಯಪ್ ಅಥವಾ ಬಿಇಒ ಕಚೇರಿಯಲ್ಲಿ ಲಭ್ಯವಿರುವ ಗಣಕಯಂತ್ರ ಅಥವಾ ಲ್ಯಾಪ್ಟಾಪ್ ಮೂಲಕ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದರು.

ಮತಗಟ್ಟೆವಾರು ನಿಯೋಜಿಸಿದ ಶಿಕ್ಷಕರು ಮತ್ತು ಬಿಎಲ್ಒ ಕಡ್ಡಾಯವಾಗಿ ಸದರಿ ಸಮೀಕ್ಷೆಯಲ್ಲಿ ಭಾಗವಹಿಸಬೇಕು.ಬೇಸಿಗೆ ಆಗಿದ್ದರಿಂದ ಬೆಳಗ್ಗೆ ಹೊತ್ತು ಮನೆ ಮನೆಗೆ ಭೇಟಿ ನೀಡಿದ್ದಲ್ಲಿ ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸಬಹುದು. ನಿಯೋಜಿಸಿದ ಎಲ್ಲ ಶಿಕ್ಷಕರು ನಿಗದಿತ ಸಮಯದಲ್ಲಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸುತ್ತಿರುವ ಬಗ್ಗೆ ಬಿಆರ್ಸಿ, ಬಿಆರ್ಪಿ, ಇಸಿಒ ಮತ್ತು ಸಿಆರ್ಪಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಪ್ರಗತಿ ವರದಿಯನ್ನು ಸಂಬಂಧಪಟ್ಟ ತಹಸೀಲ್ದಾರರಿಗೆ ನೀಡಬೇಕು. ಶಿಕ್ಷಕರು ತಮ್ಮ ಸ್ಮಾಟರ್್ಫೋನ್ ಬಳಸಿ ಸಮೀಕ್ಷೆ ಕಾರ್ಯದ ವಿವರಗಳನ್ನು ಆ್ಯಪ್ ಮೂಲಕ ನೇರವಾಗಿ ಅಪ್ಲೋಡ್ ಮಾಡತಕ್ಕದ್ದು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಮಾತನಾಡಿ, ಸಮೀಕ್ಷೆಗೆ ಕೈಗೊಂಡಿರುವ ಪೂರ್ವಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಭೂಮಿ ಸಮಾಲೋಚಕ ಮಹಾಂತೇಶ ಅವರು ಪ್ರಾಜೆಕ್ಟರ್ ಮೂಲಕ ತರಬೇತಿ ನೀಡಿದರು.

ತಹಸೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ಸಂಗಮೇಶ ಜಿಡಗೆ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ತಾಪಂ ಇಒ ಬಸವರಾಜ ಶರಭೈ, ಡಾ.ಹಣಮಂತರೆಡ್ಡಿ ಸೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.