ಕುಡಚಿ ಹತ್ತಿರದ ಕೃಷ್ಣಾ ನದಿ ಸೇತುವಿಗೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಎಸ್.ಎಸ್.ಸಂಪಗಾಂವಿ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲಿಸಿದರು. ಆರ್.ಆರ್.ಬುರಲಿ, ಎಸ್.ಜಿ.ದೊಡಮನಿ, ವೈ.ಕೆ.ಹೇಳವರ ಇದ್ದರು. 
ಜಿಲ್ಲೆ

ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ

ಪ್ರಶಾಂತ ಹೂಗಾರ

ಕುಡಚಿ: ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕರ ಮಳೆಯಿಂದ ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಎಸ್.ಎಸ್.ಸಂಪಗಾಂವಿ ಕುಡಚಿ ಹತ್ತಿರದ ಕೃಷ್ಣಾ ನದಿಗೆ ಶನಿವಾರ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು.

ಸದ್ಯಕ್ಕೆ ಪ್ರವಾಹ ಭೀತಿ ಇಲ್ಲ, ನದಿ ತೀರದ ಜನರು ದನಕರುಗಳನ್ನು ನದಿ ದಡಕ್ಕೆ ತರಬೇಡಿ, ಹೊಸ ನೀರು ಬರುತ್ತಿರುವುದರಿಂದ ಜನರು ನೀರು ಕಾಯಿಸಿ ಆರಿಸಿ ಕುಡಿಯಬೇಕು ಎಂದು ಸಲಹೆ ನೀಡಿದರು.

ಪ್ರವಾಹ ಎದುರಾದರೆ ಕೈಗೊಳ್ಳಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ, ನದಿ ತೀರದ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಾಳಜಿ ಕೇಂದ್ರಗಳು, ಗೋಶಾಲೆ ತೆರೆಯುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಕಾಗವಾಡ ತಹಸೀಲ್ದಾರ್ ಆರ್.ಆರ್.ಬುರಲಿ, ಕುಡಚಿ ಉಪತಹಸೀಲ್ದಾರ್ ಎಸ್.ಜಿ.ದೊಡಮನಿ, ಗ್ರಾಮ ಲೆಕ್ಕಾಧಿಕಾರಿ ವೈ.ಕೆ.ಹೇಳವರ, ಮಂಜುನಾಥ ಕನಕ್ಕನ್ನವರ, ಜೈಕುಮಾರ ಸನದಿ ಇತರರಿದ್ದರು.