ಮುರಗೋಡ: ಬದುಕಿಗೆ ಗಾಳಿ, ನೀರು ಹಾಗೂ ಬೆಳಕು ಎಷ್ಟು ಮುಖ್ಯವೋ, ಸಮಾಜ ಸನ್ಮಾರ್ಗದಲ್ಲಿ ಸಾಗಲು ಮನುಕುಲಕ್ಕೆ ಶರಣರ ಹಿತ ವಚನ ಅಗತ್ಯವಾಗಿವೆ ಎಂದು ರಾಮದುರ್ಗದ ಶಾಂತವೀರ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀ ಮಹಾಂತ ದುರದುಂಡೇಶ್ವರ ಮಠದ ಜಾತ್ರಾ ಮಹೋತ್ಸವ ಹಾಗೂ ಲಿಂ.ಮಹಾಂತ ಶಿವಯೋಗಿಗಳ 53ನೇ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶರಣರ ವಚನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಮಠಗಳು ಸಂಸತಿ, ಸಂಸ್ಕಾರ ಬಿತ್ತುವ ಕಾರ್ಯ ಮಾಡುತ್ತಿವೆ. ಆ ನಿಟ್ಟಿನಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವ ಮುರಗೋಡ ಮಠದ ನೀಲಕಂಠ ಸ್ವಾಮೀಜಿ ಕಾರ್ಯ ಮಾದರಿಯಾಗಿದೆ ಎಂದು ತಿಳಿಸಿದರು.
ನೀಲಕಂಠ ಸ್ವಾಮೀಜಿ ಮಾತನಾಡಿ, ನಡೆದಾಡುವ ದೇವರು ಲಿಂ.ಮಹಾಂತ ಶಿವಯೋಗಿಗಳ ತತ್ತ$್ವ ಸಿದ್ಧಾಂತ ಬದುಕಿಗೆ ಸ್ಫೂರ್ತಿಯಾಗಿವೆ ಎಂದರು.
ದುಮ್ಮವಾಡದ ಸರ್ಪಭೂಷಣ ದೇವರು ಶರಣರ ವಚನ ಕುರಿತು ಪ್ರವಚನ ನೀಡಿದರು. ಸಿಪಿಐ ವೀರೇಶ ಮಠಪತಿ, ಉಪ ತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠ ಮಾತನಾಡಿದರು.
ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೊಳಿ, ಉಪಾಧ್ಯೆ ಮಹಾದೇವಿ ಮಬನೂರ, ಧರ್ಮ ಧರ್ಮರ್ಶಿ ಅಶೋಕ ಶೆಟ್ಟರ್, ವಿ.ಬಿ. ದೇಸಾಯಿ, ಸಂತೋಷ ಹಿರೇಮಠ, ಪ್ರಾಚಾರ್ಯ ರಮೇಶ ಭಜಂತ್ರಿ, ಮಲ್ಲಯ್ಯ ಮಾಸ್ತಮರಡಿ, ಮಹಾಂತೇಶ ಗೌಡತಿ, ಶಿವನಗೌಡ ಪಾಟೀಲ ಇತರರಿದ್ದರು. ಶಿವಪ್ರಸಾದ ಹುಲ್ಲೇಪ್ಪನವರಮಠ ನಿರೂಪಿಸಿದರು.