ಲಿಂಗಸುಗೂರಿನ ಸಂಗಮೇಶ್ವರ ಪಿಯು ಕಾಲೇಜಿನಲ್ಲಿ ಆಯೋಜಸಿದ್ದ ತತ್ವಪದ ಸಾಹಿತ್ಯದ ಅವಲೋಕನ ಅನುಭಾವ ದರ್ಶನ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಸರೋಜಿನಿದೇವಿ ಪಾಟೀಲ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ದುರ್ಗಾಸಿಂಗ್, ಪ್ರಾಧ್ಯಾಪಕ ರಾಜಶೇಖರ ಶಿರಗುಂಪಿ, ಸಾಹಿತಿ ರಾಶಿ ಸರ್ಜಾಪುರ, ಪ್ರಾಧ್ಯಾಪಕರಾದ ಶಾಂತಮ್ಮ ಪಾಟೀಲ, ಡಿ.ಕೆ.ಮುಜಾವರ, ಬಸವರಾಜ, ನಿರುಪಾದಿ ಇತರರಿದ್ದರು. 
ಜಿಲ್ಲೆ

ಬದುಕಿಗೆ ಕೈದೀವಿಗೆಯಾಗಿದೆ ತತ್ವಪದಗಳು

ರುದ್ರಪ್ಪ ವಾಲಿ

ಲಿಂಗಸೂಗೂರು: ಸಮಾಜದ ಅಂಕು-ಡೊಂಕುಗಳನ್ನು ಕಟುವಾಗಿ ಟೀಕಿಸಿ ಸಮಾಜ ತಿದ್ದುವ ಕಾರ್ಯವನ್ನು ತತ್ವಪದಕಾರರು ಮಾಡಿದರು ಎಂದು ಪ್ರಾಧ್ಯಾಪಕ ರಾಜಶೇಖರ ಶಿರಗುಂಪಿ ಹೇಳಿದರು.

ಸಾಹಿತ್ಯದ ಅವಲೋಕನ

ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಾಗೂ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ರಾಜಶೇಖರಗೌಡ ಪಾಟೀಲ್ ಸ್ಮರಣಾರ್ಥ ಆಯೋಜಸಿದ್ದ ತತ್ವಪದ ಸಾಹಿತ್ಯದ ಅವಲೋಕನ ಅನುಭಾವ ದರ್ಶನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಉತ್ತರ ಕರ್ನಾಟಕ ಭಾಗವು ತತ್ವಪದ ಮತ್ತು ದಾಸ ಸಾಹಿತ್ಯದ ನೆಲೆವೀಡಾಗಿದ್ದು, ಸಂತ ಶಿಶುನಾಳ ಶರೀಫರು, ಘನಮಠೇಶ್ವರ ಶರಣರು, ನೀರಲಕೇರಿ ಬಸವಲಿಂಗ ಶರಣರು, ವಡಿಕೆಪ್ಪ ತಾತಾ ಸೇರಿದಂತೆ ಅನೇಕರು ರಚಿಸಿದ ತತ್ವಪದಗಳು ಬದುಕಿಗೆ ಕೈದೀವಿಗೆಯಾಗಿವೆ ಎಂದರು. ತತ್ವಪದಗಳ ಮೂಲಕ ಮಾನವನ ನಿಜವಾದ ಬದುಕಿನ ಅರ್ಥ ಸಾರಿದ್ದಾರೆ. ಈ ಭಾಗದ ತತ್ವಪದಕಾರರು ಸಾಹಿತ್ಯ ಸಂಗ್ರಹಿಸಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಪ್ರಾಚಾರ್ಯ ವೈ.ಬಸವರಾಜ, ಸಂಶೋಧಕ ಡಾ.ಮಹಾದೇವಪ್ಪ ನಾಗರಾಳ, ಸಿದ್ದೇಶ್ವರ ಸಾಹಿತ್ಯ ವೇದಿಕೆ ಅಧ್ಯಕ್ಷೆ ಗಿರಿಜಾ ಮಾಲಿಪಾಟೀಲ, ತಾಲೂಕು ಅಧ್ಯಕ್ಷ ದುರ್ಗಾಸಿಂಗ್, ಸಾಹಿತಿ ರಾಶಿ ಸರ್ಜಾಪುರ, ಪ್ರಾಧ್ಯಾಪಕರಾದ ಶಾಂತಮ್ಮ ಪಾಟೀಲ, ಡಿ.ಕೆ.ಮುಜಾವರ, ಬಸವರಾಜ, ನಿರುಪಾದಿ, ಮಂಜುನಾಥ ಪಾಟೀಲ, ಬೀರಪ್ಪ ಜಗ್ಗಲ, ಅನಿಲಕುಮಾರ ಮಿಶ್ರಾ, ಶರಣಮ್ಮ ಪಾಟೀಲ ಇತರರಿದ್ದರು.