ಕಾದರವಳ್ಳಿ ಗ್ರಾಮದ ಎಸ್.ವಿ.ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪಾಲಕರ ಸಭೆಯನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು.ಗಾಯತ್ರಿ ಅಜ್ಜನ್ನವರ, ಶಶಿಕಲಾ ಗುಡ್ಲಮನಿ, ಶಿವುಕುಮಾರ ಕುಲಕರ್ಣಿ, ಸಂಗನಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಕಲಿಕೆಗೆ ಅಗತ್ಯ ವಾತಾವರಣ ನಿರ್ಮಿಸಲಿ

ಎಂ.ಕೆ.ಹುಬ್ಬಳ್ಳಿ: ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸಿದರೆ ಮಕ್ಕಳೇ ಬಹುದೊಡ್ಡ ಆಸ್ತಿಯಾಗುವರು. ಹಾಗಾಗಿ, ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಸಲಹೆ ನೀಡಿದರು.

ಸಮೀಪದ ಕಾದರವಳ್ಳಿ ಗ್ರಾಮದ ಎಸ್.ವಿ.ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು. ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಆಚಾರ-ವಿಚಾರ ಕಲಿಸುವ ಜತೆಗೆ ಕಲಿಕೆಗೆ ಅಗತ್ಯ ವಾತಾವರಣ ನಿರ್ಮಿಸಬೇಕು ಎಂದರು.

ತಾಪಂ ಇಒ ಕಿರಣ ಘೋರ್ಪಡೆ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಸಮಾಜದ ಆಸ್ತಿಯನ್ನಾಗಿಸುವಲ್ಲಿ ಪಾಲಕರ ಪಾತ್ರ ಪ್ರಮುಖ ಎಂದು ತಿಳಿಸಿದರು. ಬಿಇಒ ಗಾಯತ್ರಿ ಅಜ್ಜನ್ನವರ, ಮುಖ್ಯೋಪಾಧ್ಯಾಯ ಶಶಿಕಲಾ ಗುಡ್ಲಮನಿ, ಎಸ್‌ಡಿಎಂಸಿ ಅಧ್ಯಕ್ಷ ಶಿವುಕುಮಾರ ಕುಲಕರ್ಣಿ, ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ವಿರೂಪಾಕ್ಷಿ ಸಾಧುನವರ, ರುದ್ರಪ್ಪ ಹೈಬತ್ತಿ, ಬಸವರಾಜ ಕುಲಕರ್ಣಿ, ಶಿವಲಿಂಗಪ್ಪ ಹುಗ್ಗಿ, ಉಮೇಶ ಕೊಟಗಿ, ದುಂಡಪ್ಪ ಮಾರಿಹಾಳ, ಸುರೇಶ ಸಂಗೂಳ್ಳಿ, ಸಣ್ಣಪ್ಪ ರಾಮರಾವ, ದಿನೇಶ ಗೋಣಿ ಹಾಗೂ ಶಾಲಾ ಶಿಕ್ಷಕರು ಇದ್ದರು.