ಕೆಎಲ್‌ಇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಿಪ್ಪಾಣಿಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಹಪ್ರಾಧ್ಯಾಪಕ ಡಾ. ಹರೀಶ ಕೋಲ್ಕಾರ ಮಾತನಾಡಿದರು. ಪಿ.ಐ.ಪಾಟೀಲ, ಡಾ. ಎಂ.ಎಂ. ಹುರಳಿ, ಪ್ರವೀಣ ಬಾಗೇವಾಡಿ, ಜ್ಯೋತಿ ಕಿನಿಂಗೆ ಇತರರು ಇದ್ದರು. 
ಜಿಲ್ಲೆ

ಕೆಎಲ್‌ಇಗೆ ಸಪ್ತರ್ಷಿಗಳು ಚೈತನ್ಯ

ನಿಪ್ಪಾಣಿ: ಇಂದಿನ ತಲೆಮಾರಿನ ಕಲಿಕಾ ಮಕ್ಕಳಿಗೆ ಚೈತನ್ಯ ತುಂಬಲು ಕಾಲಕಾಲಕ್ಕೆ ಮಹಾಶಕ್ತಿಗಳು ಯಾವ್ಯಾವುದೋ ಸ್ವರೂಪದಲ್ಲಿ ಜನ್ಮತಾಳುತ್ತಿರುತ್ತವೆ. ಅಂತಹ ಶಕ್ತಿ ಸ್ವರೂಪಿ ಚೈತನ್ಯಗಳು ನಮ್ಮ ಕೆಎಲ್‌ಇ ಸಂಸ್ಥೆಯ ವಿದ್ಯಾಭಂಡಾರದ ಅಮೂಲ್ಯ ಮೂಲರತ್ನಗಳು ಈ ಸಪ್ತರ್ಷಿಗಳು ಎಂದು ಬೆಳಗಾವಿಯ ಆರ್‌ಪಿಡಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಹರೀಶ ಕೋಲ್ಕಾರ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಅಂಗಸಂಸ್ಥೆಗಳ ಸಹಯೋಗದಲ್ಲಿ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದಲ್ಲಿ 108ನೇ ಕೆಎಲ್‌ಇ ಸಂಸ್ಥಾಪನಾ
ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಎಂ.ಆರ್. ಸಾಖರೆ, ಎಸ್.ಎಸ್.ಬಸವನಾಳ, ಬಿ.ಎಸ್.ಹಂಚಿನಾಳ, ಪಿ.ಆರ್.ಚಿಕ್ಕೋಡಿ, ಎಚ್.ಎ್.ಕಟ್ಟಿಮನಿ, ಬಿ.ಬಿ. ಮಮದಾಪುರ ಮತ್ತು ವಿ.ವಿ.ಪಾಟೀಲ ಈ ಏಳು ಜನ ಶಿಕ್ಷಕರೇ ಸಪ್ತ ಋಷಿಗಳು. ಅಂದಿನ ಕಾಲದಲ್ಲಿ ಅವರು ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಅವಶ್ಯಕತೆ ಅರಿತು ಕೆಎಲ್‌ಇ ಸಂಸ್ಥೆ ಕಟ್ಟಿದರು. ವಿದ್ಯಾರ್ಥಿಗಳು ಅವರ ಸ್ಮರಣೆ ಮಾಡಿಕೊಳ್ಳುವ ಮೂಲಕ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದರು.

ಸಪ್ತರ್ಷಿಗಳ ಭಾವಚಿತ್ರಕ್ಕೆ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಪ್ರವೀಣ ಬಾಗೇವಾಡಿ ಮತ್ತು ಗಣ್ಯರು ಪುಷ್ಪಾರ್ಪಣೆ ಮಾಡಿದರು. ಸ್ಥಳೀಯ ಪತ್ರಿಕಾ ವರದಿಗಾರರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಎಂ.ಎಂ. ಹುರಳಿ ಮಾತನಾಡಿದರು. ಉಪಪ್ರಾಚಾರ್ಯ ಡಾ.ಆರ್.ಜಿ. ಖರಾಬೆ, ಐಕ್ಯೂಎಸಿ ಸಂಯೋಜಕ ಡಾ. ಅತುಲಕುಮಾರ ಕಾಂಬಳೆ, ಆಂಗ್ಲ ಮಾಧ್ಯಮಿಕ ಶಾಲೆ ಪ್ರಾಚಾರ್ಯ ಪಿ.ಐ.ಪಾಟೀಲ, ಬಿಸಿಎ ಮಹಾವಿದ್ಯಾಲಯದ ಪ್ರಾಚಾರ್ಯೆ ಜ್ಯೋತಿ ಕಿನಿಂಗೆ, ಡಾ.ಗಂಗಾಂಬಿಕಾ ಚೌಗಲಾ, ಆರ್.ಮೋನಿಕಾ ಇತರರು ಇದ್ದರು.