ಮಿರಜ್‌ನಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಡಾ.ಸಚಿನ ಸುಗಣ್ಣವರ ಚಾಲನೆ ನೀಡಿದರು. ಡಾ.ನೇಹಾ ಸುಗಣ್ಣವರ ಇತರರಿದ್ದರು. 
ಜಿಲ್ಲೆ

ಬಂಜೆತನಕ್ಕೆ ಚಿಂತಿಸಬೇಕಿಲ್ಲ

ಪ್ರಶಾಂತ ಹೂಗಾರ

ಕಾಗವಾಡ: ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು, ಬಂಜೆತನ ಸಮಸ್ಯೆಗೆ ಚಿಂತಿಸಬೇಕಾಗಿಲ್ಲ ಎಂದು ಮಿರಜದ ಸಚಿನ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್‌ನ ವೈದ್ಯ ಡಾ.ಸಚಿನ ಸುಗಣ್ಣವರ ಹೇಳಿದರು.

ಮಿರಜನ ಸಚಿನ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್ ಆಸ್ಪತ್ರೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಂಜೆತನ ನಿವಾರಣೆ ಮತ್ತು ಸ್ತ್ರೀ ರೋಗ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದೇಶದಲ್ಲಿ ಬಂಜೆತನ ನಿವಾರಣೆಗೆ ಬಳಸುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಸಚಿನ ಆಸ್ಪತ್ರೆಯಲ್ಲಿ ಲಭ್ಯವಿದ್ಯು, ಕರ್ನಾಟಕ, ಮಹಾರಾಷ್ಟ್ರದ ಸಾವಿರಾರು ಜನ ಚಿಕಿತ್ಸೆ ಪಡೆದು, ಸಂತಾನ ಭಾಗ್ಯ ಪಡೆದುಕೊಂಡಿದ್ದಾರೆ.

ಬಂಜೆತನದ ಸಮಸ್ಯೆಯಿಂದ ಬಳಲುವರು ಸಮಸ್ಯೆ ಪರಿಹಾರಕ್ಕಾಗಿ ಮೊ. 09765010834 ಸಂಪರ್ಕಿಸಬಹುದು ಎಂದು ತಿಳಿಸಿದರು. ಡಾ.ನೇಹಾ ಸುಗಣ್ಣವರ ಇತರರು ಇದ್ದರು.