ಮುದಗಲ್‌ನಲ್ಲಿ ಏರ್ಪಡಿಸಿದ್ದ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್ ಚಾಲನೆ ನೀಡಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚನ್ನಪ್ಪ ಮೇಟಿ, ತಮ್ಮಣ್ಣ ಗುತ್ತೇದಾರ, ಎಸ್.ಎನ್, ಅಕ್ಕಿ, ಡಾ.ಮಂಜುನಾಥ ಪಿಕಳಿಹಾಳ, ಮುಖ್ಯಶಿಕ್ಷಕ ನೀಲಪ್ಪ ಅಚನೂರು, ಶಿಕ್ಷಕ ಮಲ್ಲಪ್ಪ ದೇವರಗುಡಿ ಇದ್ದರು. 
ಜಿಲ್ಲೆ

ಆರೋಗ್ಯ ವೃದ್ಧಿಗೆ ಕ್ರೀಡೆ ಪೂರಕ

ಮುದಗಲ್: ಕ್ರೀಡಾಕೂಟಗಳಲ್ಲಿ ತೊಡಗುವುದರಿಂದ ಮಕ್ಕಳಲ್ಲಿ ಶಿಸ್ತು, ಸಂಯಮ ಬೆಳೆಯುತ್ತದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡರ್ ಹೇಳಿದರು.

ಪಟ್ಟಣದ ಸರ್ಕಾರಿ ಪಪೂ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರೌಢಶಾಲಾ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು.

ಆರೋಗ್ಯ ವೃದ್ಧಿಗೆ ಕ್ರೀಡೆ ಪೂರಕವಾಗಿದೆ. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಯಲ್ಲಿ ಭಾಗವಹಿಸುವುದನ್ನು ಮೈಗೂಡಿಸಿಕೊಳ್ಳಬೇಕು. ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪಾಲಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು. ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಜೆಸ್ಕಾಂ ಅಧಿಕಾರಿ ಬನ್ನೆಪ್ಪ ಪೂಜಾರಿ, ಎಸ್ಡಿಎಂಸಿ ಅಧ್ಯಕ್ಷ ಪಾಲಾಕ್ಷಿ ರಾವ್ ದೇಶಪಾಂಡೆ, ಟಿ.ಬದ್ರಿನಾಥ ಶೆಟ್ಟಿ, ಮುಖ್ಯಶಿಕ್ಷಕ ಮೊಹ್ಮದ್ ಷರೀಫ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎನ್. ಅಕ್ಕಿ, ಸಜ್ಜಲಗುಡ್ಡ ಪ್ರೌಢಶಾಲಾ ಮುಖ್ಯಶಿಕ್ಷಕ ಬಸ್ಸಪ್ಪ ಹಂದ್ರಾಳ, ತಮ್ಮಣ್ಣ ಗುತ್ತೇದಾರ, ಶಿಕ್ಷಕ ರಾಮಚಂದ್ರ ಢವಳೆ, ಮಂಜನಾಥ ಬನ್ನಿಗೋಳ್ಕರ, ಹಸನ್ ಕವ್ವಾ, ಕರಿಯಪ್ಪ ಯಾದವ, ನಾಗರಾಜ ತಳವಾರ, ಗಂಗಾವತಿ ಜಗದೀಶ ದೇಸಾಯಿ, ಸಂಗಪ್ಪ ಅಡವಿಬಾವಿ ಇತರರಿದ್ದರು.