ಜಿಲ್ಲೆ

ಆರೋಗ್ಯಕ್ಕಾಗಿ ಯೋಗ ರೂಢಿಸಿಕೊಳ್ಳಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಮುನವಳ್ಳಿ: ದಿನಾಚರಣೆಗಷ್ಟೇ ಯೋಗ ಸೀಮಿತಗೊಳಿಸದೆ ದೈನಂದಿನ ಜೀವನದಲ್ಲಿಯೂ ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಬೆಳಗಾವಿ ಡಯಟ್​ ಪ್ರಾಚಾರ್ಯ ಬಸವರಾಜ ನಾಲತವಾಡ ಹೇಳಿದರು.

ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಜಿಪಂ, ಶಾಲಾ ಶಿಣ ಇಲಾಖೆ, ಡಿಡಿಪಿಐ ಕಚೇರಿ, ಬಿಇಒ ಕಚೇರಿ ಹಾಗೂ ಜೆಎಸ್​ಪಿ ಸಂದ ಆರ್​.ಬಿ.ಯಲಿಗಾರ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಯೋಗ ಮತ್ತು ಚದುರಂಗ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಟಿಎಪಿಸಿಎಂಎಸ್​ ಅಧ್ಯ ರವೀಂದ್ರ ಯಲಿಗಾರ, ಬಿಇಒ ಎ.ಎ.ಖಾಜಿ ಮಾತನಾಡಿ, ಯೋಗ ಮತ್ತು ಚೆಸ್​ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ ಎಂದರು.

ಯೋಗ ಗುರು ಆರ್​.ಎಚ್​.ಪಾಟೀಲ, ರಾಷ್ಟ್ರೀಯ ಯೋಗಪಟು ಸಂಜು ಬೆಳ್ಳಿಕುಪ್ಪಿ, ವೈ.ಎಚ್​.ಗೌಡರ, ಅರುಣ ಹೊನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ಯೋಗ ಪ್ರದರ್ಶನ ನೀಡಿದರು.

ಜೆಎಸ್​ಪಿ ಸಂದ ಅಧ್ಯ ಎಂ.ಆರ್​.ಗೋಪಶೆಟ್ಟಿ, ಪುರಸಭೆ ಅಧ್ಯ ಸಿ.ಬಿ.ಬಾಳಿ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ೇತ್ರ ಸಮನ್ವಯಾಧಿಕಾರಿ ಬಿ.ಎನ್​.ಬ್ಯಾಳಿ, ಶಿಣ ಸಂಯೋಜಕ ಸುಧೀರ ವಾಗೇರಿ, ದೈಹಿಕ ಶಿಣ ಪರಿವೀಕರಾದ ಎಂ.ಬಿ.ಕೊಪ್ಪದ, ಸಾಧನಾ ಬದ್ರಿ, ಎ.ಎ.ಕರೀಕಟ್ಟಿ, ಎಂ.ಎಂ.ಮುರನಾಳ, ಎಂ.ಎಚ್​.ಕಾಮಣ್ಣವರ, ಎಂ.ಎ.ಕಮತಗಿ, ಭವಾನಿ ಖೊಂದುನಾಯ್ಕ, ವೈ.ಟಿ.ತಂಗೋಜಿ, ಎಂ.ಎಂ.ಲಕ್ಕನ್ನವರ, ಶ್ರೀಶೈಲ ಗೋಪಶೆಟ್ಟಿ, ಅಶೋಕ ಸಂಕನ್ನವರ, ಸುರೇಶ ಜಾಧವ, ಕಿರಣ ನಾಯ್ಕರ, ಅಪ್ಪು ಹಿರಲಿಂಗನ್ನವರ, ದಾನು ಗದಗಿನ, ಎ.ಎ.ಮುಲ್ಲಾ, ಎ.ಎ್​.ಶಾನಭೋಗ, ಪರುಶುರಾಮ ಕದಂ ಇತರರಿದ್ದರು.