ಜಿಲ್ಲೆ

ಹಾರುಗೊಪ್ಪ ಸಹಕಾರಿಗೆ ಸಣ್ಣಮಾಯಪ್ಪ ಚೇರ್ಮನ್​

ಸೋಮಲಿಂಗ ತಳವಾರ

ಮುರಗೋಡ: ಸಮೀಪದ ಹಾರುಗೊಪ್ಪ ಗ್ರಾಮದ ವಿವಿಧೋದ್ದೇಶ ಪಿಕೆಪಿಎಸ್​ಗೆ ಬುಧವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಮುಂಬರುವ 5 ವರ್ಷಗಳ ಅವಧಿಗೆ ಅಧ್ಯರಾಗಿ ಸಣ್ಣಮಾಯಪ್ಪ ದಾಸನಾಳ ಹಾಗೂ ಉಪಾಧ್ಯರಾಗಿ ಶಿವಪ್ಪ ಜಕ್ಕಾನಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ.

ಮುಖಂಡ ಬಸವನಗೌಡ ಪಾಟೀಲ ಮಾತನಾಡಿ, ಸಂದ ಬೆವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಅಧಿಕಾರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಚುನಾವಣಾಧಿಕಾರಿಯಾಗಿ ರಾಕೇಶ ಗೋವನಕೊಪ್ಪ ಕಾರ್ಯನಿರ್ವಹಿಸಿದರು. ಮುರಗೋಡ ಠಾಣೆ ಪಿಐ ವೀರೇಶ ಮಠಪತಿ, ಪಿಎಸ್​ಐ ಡಬ್ಬೂ$್ಲ.ಎಚ್​. ಯಾದವಾಡ ನೇತೃತ್ವದ ಪೊಲೀಸ್​ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಗೆಲವಿನ ನಂತರ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ನಿರ್ದೇಶಕರಾದ ವೀರಭದ್ರಪ್ಪ ಚಚಡಿ, ಸಿದ್ದಪ್ಪ ಕುಲಗೋಡ, ಸಿದ್ದಪ್ಪ ಈರಣ್ಣವರ, ಬಸವ್ವ ತಿಪ್ಪನವರ, ಸಿದ್ದಪ್ಪ ಪೂಜೇರಿ, ಸಂತೋಷ ಶೆಟ್ಟರ, ಮಲ್ಲೇಶ ಮಲ್ಲೂರ, ನಾಗಪ್ಪ ಪೂಜೇರಿ, ಯಮನಪ್ಪಗುಂಡ್ಲೂರ, ಸಿದ್ದಪ್ಪ ಕಾಗಿ, ರುದ್ರೇಶ ಕಲ್ಮಠ, ಮಾಯಪ್ಪ ಕಾಗಿ, ಚಿದಾನಂದ ಪೂಜೇರಿ ಇದ್ದರು.