ಕುಕನೂರು ತಾಲೂಕಿನ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎದುರು ಅತಿಥಿ ಉಪನ್ಯಾಸಕರಾದ ವೀರೇಶ್ ಕಬಾಡಿ, ವೀರನಗೌಡ ದಾನಪ್ಪಗೌಡ, ಯೋಗೇಶ್ ಚೌಡಿ, ಅರುಣಕುಮಾರ ಪಟೇದ್, ಸೈಯದ್‌ಅಮೀರ್ ಹುಸೇನ್, ಆನಂದರಾವ್ ಕುಲಕರ್ಣಿ, ವಿದ್ಯಾ ಲಕಮಾಪುರಮಠ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲು ಆಗ್ರಹ

Gangavati - Desk - Veeresh S Ullagaddi

ಕುಕನೂರು: ಮೂವತ್ತೇರಡು ಸಾವಿರ ರೂ.ಗೆ ವೇತನ ಹೆಚ್ಚಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಇಂಜಿನಿಯರಿಂಗ್ ಕಾಲೇಜು ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದಿಂದ ತಾಲೂಕಿನ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎದುರು ಪ್ರತಿಭಟನೆ ನಡೆಸಲಾಯಿತು.


ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ 15,000 ರೂ. ವೇತನಕ್ಕೆ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರಸ್ತುತ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರ, ಕೃಪಾಂಕ, ಸೇವಾ ಪ್ರಮಾಣ ಪತ್ರ, 26,000 ರೂ.ದಿಂದ 32,000 ರೂ. ವೇತನ ನೀಡಲಾಗುತ್ತಿದೆ. ಅದೇ ಸೌಲಭ್ಯಗಳನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅತಿಥಿ ಉಪನ್ಯಾಸಕರಿಗೂ ವಿಸ್ತರಿಸಬೇಕು. ಪ್ರತಿ ತಿಂಗಳು ಸರಿಯಾಗಿ ವೇತನ ನೀಡಬೇಕು ಒತ್ತಾಯಿಸಿದರು. ಅತಿಥಿ ಉಪನ್ಯಾಸಕರಾದ ಪವಿತ್ರಾ ಕರಮುಡಿ, ರತ್ನಾ ದೇಶಪಾಂಡೆ, ಉಮಾಮಹೇಶ್ವರಿ ಹಿರೇಮಠ, ರೇಣುಕಾ ಇತರರಿದ್ದರು.