ಹಗರಿಬೊಮ್ಮನಹಳ್ಳಿ: ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಆರೋಪಿಸಿದರು.
ತಾಲೂಕಿನ ಬನ್ನಿಗೋಳ ಗ್ರಾಮದ ಏತನೀರಾವರಿ ಯೋಜನೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, 25 ಲಕ್ಷ ರೂ. ವೆಚ್ಚದಲ್ಲಿ 2 ಹೊಸ ಮೋಟಾರ್ ಪಂಪ್‌ಗಳಿಂದ ಈ ಯೋಜನೆ ಸಾಕಾರವಾಗಲಿದೆ ಎಂದರು.
ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರೇ ಅನುದಾನಕ್ಕೆ ಗೋಳಾಡುತ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಸರ್ಕಾರ ಹಣ ನೀಡದಿದ್ದರೂ ಕೆಕೆಆರ್‌ಡಿಬಿ, ಕೆಎಂಇಆರ್‌ಸಿ ಹಾಗೂ ಡಿಎಂಎಫ್ ಮುಖಾಂತರ 650 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಅಮೃತ್ ಯೋಜನೆಯಲ್ಲಿ ಮರಿಯಮ್ಮನಹಳ್ಳಿ 77ಕೋಟಿ ರೂ., ಕೊಟ್ಟೂರು 85 ಕೋಟಿ ರೂ., ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ 35 ಕೋಟಿ ರೂ. ಕುಡಿವ ನೀರಿಗಾಗಿ ತಂದಿದ್ದೇವೆ. ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು 4 ವರ್ಷದೊಳಗಾಗಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ.ಮಲ್ಲಿಕಾರ್ಜುನ, ರೈತ ಮುಖಂಡ ಕಿನ್ನಾಳ್ ಸುಭಾಷ್, ಮೈನಳ್ಳಿ ಕೊಟ್ರೇಶ್, ಗಿರಿಧರ ರೆಡ್ಡಿ, ಸಿದ್ದಾರೆಡ್ಡಿ, ರವಿಪ್ರಸಾದ್, ಶಾಂತಪ್ಪ, ಅರುಣ್‌ಕುಮಾರ್, ಹರೀಶ್, ಎನ್.ಮಂಜುನಾಥ, ಸಣ್ಣ ನೀರಾವರಿ ಇಲಾಖೆ ಎಇ ಜಗದೀಶ್, ಶಾಸಕರ ಆಪ್ತ ಸಹಾಯಕ ಬಿ.ದೊಡ್ಡಬಸಪ್ಪ ರಡ್ಡಿ, ಬ್ಯಾಟಿ ನಾಗರಾಜ, ರಾಹುಲ್ ನಾಯ್ಕ, ಮಾಧವ ಇದ್ದರು.