ತಾಲೂಕಿನ ಯರಗಟ್ಟಿ ಮುಧೋಳ ರಾಷ್ಟ್ರೀಯ ಹೆದ್ಧಾರಿಯ ಕಟಕೋಳ ಸಮೀಪ 1.40 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಹಾದೇವಪ್ಪ ಯಾದವಾಡ ಭೂಮಿಪೂಜೆ ನೆರವೇರಿಸಿದರು. ಮಾರುತಿ ತುಪ್ಪದ, ಎಸ್.ಎಸ್.ಢವಣ, ಎಂ.ಎಂ.ಆತಾರ, ಪುಲಕೇಶಿ ವಾಲಿ, ರವಿಕುಮಾರ ಇತರರು ಇದ್ದರು. 
ಜಿಲ್ಲೆ

ಕ್ಷೇತ್ರದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಬದ್ಧ

ರಾಮದುರ್ಗ: ರೈತ ಸಮುದಾಯದ ಬಹುದಿನಗಳ ಬೇಡಿಕೆಯಾದ ಕಟಕೋಳ ಖಾನಪೇಠ ರಸ್ತೆ ಸುಧಾರಣೆಗೆ ರಾಜ್ಯ ಸರ್ಕಾರದಿಂದ ಸುಮಾರು ಒಂದೂವರೆ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇನ್ನುಳಿದ ರಸ್ತೆ ಕಾಮಗಾರಿಗಾಗಿ 10 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.

ತಾಲೂಕಿನ ಯರಗಟ್ಟಿ ಮುಧೋಳ ರಾಷ್ಟ್ರೀಯ ಹೆದ್ಧಾರಿಯ ಕಟಕೋಳ ಸಮೀಪ 1.40 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಬಹುದೊಡ್ಡ ಗ್ರಾಮವಾದ ಕಟಕೋಳಕ್ಕೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳ ಸುಧಾರಣೆಗೆ ಈಗಾಗಲೇ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು, ಇನ್ನುಳಿದ ರಸ್ತೆಗಳನ್ನು ಸುಧಾರಣೆ ಮಾಡಲು ಹಂತ ಹಂತವಾಗಿ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕರೊನಾ ಮತ್ತು ಪ್ರವಾಹದಿಂದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿದ್ದು, ಕ್ಷೇತ್ರದ ಜನತೆಗೆ ಅಭಿವೃಧ್ಧಿ ವಿಷಯದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಪಂ ಸದಸ್ಯ ಮಾರುತಿ ತುಪ್ಪದ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಎಸ್.ಎಸ್.ಢವಣ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಂ.ಎಂ.ಆತಾರ, ಲೋಕೋಪಯೋಗಿ ಇಲಾಖೆ ಎಇಇ ಆರ್.ಝಡ್.ಸೊಲ್ಲಾಪೂರೆ, ಇಂಜಿನಿಯರ್ ರವಿಕುಮಾರ, ಗುತ್ತಿಗೆದಾರ ಪುಲಕೇಶಿ ವಾಲಿ,
ಗ್ರಾಮಸ್ಥರು ಹಾಗೂ ಇತರರು ಇದ್ದರು.