ಇನಾಮದಾರ ಶುಗರ್ಸ್ ಬಾಯ್ಲರ್ ಪ್ರದೀಪನ ಕಾರ್ಯಕ್ರಮ ಜರುಗಿತು. ವಿಜಯ ಮೆಟಗುಡ್ಡ, ಜಯರಾಜ ಮೆಟಗುಡ್ಡ, ಶ್ರೀನಿವಾಸ ಸುಂಕರಣ ಇತರರು ಇದ್ದರು. 
ಜಿಲ್ಲೆ

ರೈತರ ಶ್ರೇಯೋಭಿವೃದ್ಧಿಗೆ ಕಾರ್ಖಾನೆ ಬದ್ಧ

ಬೈಲಹೊಂಗಲ: ನಾಡಿನ ರೈತರ ಅಭಿವೃದ್ಧಿ ಉದ್ದೇಶವುಳ್ಳ ಇನಾಮದಾರ ಶುಗರ್ಸ್ ಸಕ್ಕರೆ ಕಾರ್ಖಾನೆಯು ಕೆಎಲ್‌ಇ ಸಂಸ್ಥೆ ಚೇರ್ಮನ್ ಡಾ.ಪ್ರಭಾಕರ ಕೋರೆ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಮಿತ ಕೋರೆ ನೇತೃತ್ವ ಹಾಗೂ ಆಡಳಿತ ಮಂಡಳಿ ಸಹಕಾರದಲ್ಲಿ ರೈತರ ಸೇವೆ ಮಾಡುತ್ತಿದೆ. ಅಲ್ಲದೆ, ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಿದೆ ಎಂದು ಕಾರ್ಖಾನೆಯ ನಿರ್ದೇಶಕ ವಿಜಯ ಮೆಟಗುಡ್ಡ ಹೇಳಿದ್ದಾರೆ.

ಕಾರ್ಖಾನೆ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಾಯ್ಲರ್ ಪ್ರದೀಪನ ಪೂಜೆ, ಹೋಮ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರ ಸಹಕಾರದೊಂದಿಗೆ ಈ ಹಂಗಾಮಿನಲ್ಲಿ ಕಾರ್ಖಾನೆ ಹೆಚ್ಚಿನ ಕಬ್ಬು ನುರಿಸುವ ಗುರಿ ಹೊಂದಿದೆ. ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗಿದ್ದು, ಕಬ್ಬು ಬೆಳೆಗಾರರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಲು ಮನವಿ ಮಾಡಿದರು.

ಮುರಗೋಡ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ, ಬೈಲಹೊಂಗಲ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ಕಾರ್ಖಾನೆಯಿಂದ ರೈತರ ಶ್ರೇಯೋಭಿವೃದ್ಧಿಯಾಗಲಿ ಎಂದು ಹಾರೈಸಿದರು.

ವ್ಯವಸ್ಥಾಪಕ ನಿರ್ದೇಶಕ ಅಮಿತ ಕೋರೆ, ನಿರ್ದೇಶಕರಾದ ವಿಜಯ ಮೆಟಗುಡ್ಡ, ಅನಿಲ ಬಾಗಿ, ವಿಕ್ರಮ ಇನಾಮದಾರ, ಜಯರಾಜ ಮೆಟಗುಡ್ಡ ದಂಪತಿ ಸಮೇತ ಬಾಯ್ಲರ್‌ಗೆ ಪೂಜೆ ಸಲ್ಲಿಸಿದರು. ಕೆಎಲ್‌ಇ ಸಂಸ್ಥೆ ನಿರ್ದೇಶಕ ಎಸ್.ಸಿ. ಮೆಟಗುಡ್ಡ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಲಕ್ಷ್ಮೀ ಇನಾಮದಾರ, ಕಾರ್ತಿಕ ಪಾಟೀಲ, ಘಟಕದ ಮುಖ್ಯಸ್ಥ ಶ್ರೀನಿವಾಸ ಸುಂಕರಣ, ಸಿಇಒ ರವೀಂದ್ರ ಪಟ್ಟಣಶೆಟ್ಟಿ, ಕಾರ್ಖಾನೆ ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಕಾರ್ಮಿಕರು, ರೈತರು ಇದ್ದರು.