ಜಿಲ್ಲೆ

ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು - ಸಚಿವ ಶ್ರೀಮಂತ ಪಾಟೀಲ

ಐನಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಲಜೀವನ ಮಿಷನ್ ಯೋಜನೆಯಡಿ ದೇಶದ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ಹೊಂದಿದ್ದು, ಪ್ರಾಯೋಗಿಕವಾಗಿ ಕಾಗವಾಡ ಮತಕ್ಷೇತ್ರದ ಮೋಳೆ ಗ್ರಾಮದಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಕೈಮಗ್ಗ ಹಾಗೂ ಜವಳಿ ಮತ್ತು ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಸಮೀಪದ ಮೋಳೆ ಗ್ರಾಮದ ವಾರ್ಡ್.ನಂ 1 ರಲ್ಲಿ 52 ಲಕ್ಷ ರೂ. ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೋಳೆ ಗ್ರಾಮದಲ್ಲಿ 650 ಮನೆಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದ್ದು, ಎರಡನೆಯ ಹಂತದಲ್ಲಿ ಬಾಕಿ ಉಳಿದ ಮನೆಗಳಿಗೆ ನೀರು ಸರಬರಾಜು ಮಾಡುವ ಗುರಿ ಹೊಂದಿದ್ದೇವೆ ಎಂದರು.ಜೈನ ಸಮಾಜ ಮಂದಿರದಲ್ಲಿ ಸಮುದಾಯ ಭವನ ನಿರ್ಮಿಸಲು 20 ಲಕ್ಷ ರೂ. ಮಂಜೂರುಗೊಂಡಿದ್ದು, ಮುಂಬರುವ ತಿಂಗಳು ನೇರವಾಗಿ ಕಮಿಟಿ ಖಾತೆಗೆ ಹಣ ಸಂದಾಯವಾಗಲಿವೆ ಎಂದರು.

ಜೈನ ಸಮಾಜದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.ಗ್ರಾಪಂ ಅಧ್ಯಕ್ಷ ಭೂತಾಳಿ ಥರಥರೆ, ಗುತ್ತಿಗೆದಾರ ಅಶೋಕ ಹುಗ್ಗಿ, ಮುಖಂಡರಾದ ಮಹಾವೀರ ಪಡನಾಡ, ದೀಪಕ ಪಾಟೀಲ, ಸಂಜಯ ತೆಲಸಂಗ, ಪಿಂಟು ಮುಂಜೆ, ಸಿದ್ದು ಹವಳೆ, ಲಕ್ಷ್ಮಣ ಹಳಮನಿ, ದುಂಡಪ್ಪ ತುಗಶೆಟ್ಟಿ, ಅಪ್ಪಾಸಾಬ ಪಾಟೀಲ, ಅನಂತ ಯರಂಡೋಲಿ, ಶೀತಲ ಯರಂಡೋಲಿ, ಪಾರ್ಶ್ವನಾಥ ಶೆಟ್ಟಿ, ಅಮಿತ್ ಹೊಂಬಳ್ಳಿ, ಸಂದೀಪ ನಲವಡೆ, ರವಿ ಬನಚೋಡ, ಆನಂದ ಕನವಿ, ಬಸವರಾಜ ತೇಲಿ, ಪರಶುರಾಮ ಕಾಂಬಳೆ, ಸುಧಾಕರ ಚೋರಮುಲೆ, ಧರ್ಮಾ ಕೊಳೇಕರ, ಉಲ್ಲಾಸ ಹರಳೆ, ಮಹಾದೇವ ತೇಲಿ, ಸುರೇಶ ಹಳ್ಳೋಳ್ಳಿ, ಡಾ.ಅಪ್ಪಾಸಾಬ ಬನಚೋಡ, ಸುಕುಮಾರ ಮಲ್ಲುಖಾನ, ಸಂಜಯ ಕೌಲಗಿ, ಶ್ರೀಮಂತ ಬಚ್ಚಗೋಳ, ರಾಜು ನಾಯಿಕ ಇದ್ದರು.

ಸಂಬರಗಿ ವರದಿ: ಬಸವೇಶ್ವರ ಏತ ನಿರಾವರಿ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಹಸಿರು ಕ್ರಾಂತಿ ಮಾಡುತ್ತೇವೆ ಎಂದು ಜವಳಿ, ಕೈಮಗ್ಗ ಹಾಗೂ ಅಲ್ಪಸಂಖ್ಯಾಂತ ಸಚಿವ ಶ್ರೀಮಂತ ಪಾಟೀಲ ಹೇಳಿದರು. ಸಮೀಪದ ಜಂಬಗಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಜನರ ಸಹಕಾರದಿಂದ ಗ್ರಾಮಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು. \

ಪಿಕೆಪಿಎಸ್ ಸಂಘದ ಅಧ್ಯಕ್ಷ ದತ್ತಾ ಭೋಸಲೆ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಮಹಾದೇವ ಕೋರೆ, ವಿನಾಯಕ ಬಾಗಡಿ, ಆರ್.ಎಂ.ಪಾಟೀಲ, ಶಿವಾನಂದ ಮಗದುಮ್ಮ, ವಿನಾಯಕ ಪಾಟೀಲ, ಪೋಪಟ ಜಾಧವ, ಬಂಡು ಜಾಧವ, ಶಶಿಧರ ಕುಂಬಾರ, ಗಣೇಶ ಪಾಟೀಲ, ಶಿವಶಂಕರ ಕೆಂಪವಾಡೆ, ರಾಜೇಂದ್ರ ಪಾಟೀಲ, ಮಲ್ಲಪ್ಪ ಮಾಳಿ, ವಿಠ್ಠಲ ತಗಾರೆ, ಗೋವಿಂದ ಪಾಟೀಲ, ಭಗವಾನ ಚವ್ಹಾಣ, ಜಿತೇಂದ್ರ ಸೂರ್ಯವಂಶಿ ಇತರರು ಇದ್ದರು.