ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದಲ್ಲಿ ಗಣತಿ ಕಾರ್ಯನಡೆಯಿತು. ಶಿಕ್ಷಕ ತಿಪ್ಪೇಶ, ವಿಎ ಶಿವಕುಮಾರ್, 
ಜಿಲ್ಲೆ

ಗಣತಿದಾರರಿಗೆ ತಲೆನೋವಾದ ನೆಟ್‌ವರ್ಕ್ ಸಮಸ್ಯೆ

ರುದ್ರಪ್ಪ ವಾಲಿ

ಕನಕಗಿರಿ: ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಒಂದು ದಿನ ತಡವಾಗಿ ಆರಂಭವಾಗಿರುವ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ, ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಗಣತಿದಾರರಿಗೆ ತಲೆ ನೋವಾಗಿ ಪರಿಣಮಿಸಿದೆ.

ಗಣತಿದಾರರಿಗೆ ಈ ಮೊದಲೇ ಸರ್ವರ್ ಸಮಸ್ಯೆ ಕಾಡುತ್ತಿದೆ. ಈ ನಡುವೆ ಪಟ್ಟಣ ಸೇರಿ ಟವರ್ ಇರುವ ಗ್ರಾಮಗಳಲ್ಲಿ ಗಣತಿದಾರರನ್ನು ಹೊರತುಪಡಿಸಿ, ತಾಲೂಕಿನ ರಾಮದುರ್ಗಾ, ಕೆ.ಮಲ್ಲಾಪುರ, ಹಿರೇಖೇಡ, ಹೊಸಗುಡ್ಡ, ಸಿರಿವಾರ, ಗೋಡಿನಾಳ, ಚಿರ್ಚನಗುಡ್ಡ, ಅಡವಿಬಾವಿ, ದೊಡ್ಡತಾಂಡಾ, ಚಿಕ್ಕತಂಡಾ, ಹುಲಸನಹಟ್ಟಿ, ಕನ್ನೇರಮಡು, ಸೋಮಸಾಗರ ಸೇರಿ ಇತರೇ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಸಮೀಕ್ಷಾ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ.

ಸರ್ವರ್ ಸಮಸ್ಯೆ ಅರಿತುಕೊಂಡ ಗಣತಿದಾರರು ಸೆ.24ರ ಬುಧವಾರ ಬೆ.6 ಗಂಟೆಯಿಂದಲೇ ಸಮೀಕ್ಷೆ ಕಾರ್ಯ ಆರಂಭಿಸಿದ್ದಾರೆ. ಆದರೂ ಸರ್ವರ್ ಸಮಸ್ಯೆಯಾಗುತ್ತಿರುವುದು ಕಂಡು ಬರುತ್ತಿದೆ. ಇತ್ತ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಹೊಸ ಆ್ಯಪ್ ಡೌನಲೋಡ್ ಮಾಡಿಕೊಂಡು ಸರ್ವೇ ಮಾಡಲು ಮುಂದಾದರೂ ನೆಟ್‌ವರ್ಕ್ ಸಮಸ್ಯೆ ಮುಂದುವರಿದಿದೆ. ಇದರಿಂದ ಗಣತಿದಾರರಿಗೆ ತೀವ್ರ ತಲೆನೋವು ತರಿಸಿದೆ.

60 ಪ್ರಶ್ನಾವಳಿ ಮುಗಿಸುವ ವೇಳೆಗೆ ಸರ್ವರ್ ಕಾಡುತ್ತಿದೆ. ಇನ್ನೂ ಕೆಲ ಗಣತಿದಾರರು ಸರ್ವರ್ ಸಮಸ್ಯೆ ಇರುವ ಕುರಿತು ತಾಂತ್ರಿಕ ತಂಡದ ವ್ಯಾಟ್ಸಾಪ್ ಗ್ರೂಪ್ಪಿಗೆ ರವಾನಿಸಿದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಗಣತಿದಾರರು ಅಸಹಾಯಕತೆ ವ್ಯಕ್ತಪಡಿಸಿದರು.

ಸರ್ವರ್ ಸಮಸ್ಯೆ ಕುರಿತು ಗಣತಿದಾರರು ಗಮನಕ್ಕೆ ತಂದಿದ್ದಾರೆ. ತಾಂತ್ರಿಕ ಅನುಭವಿಗಳ ಜತೆ ಚರ್ಚಿಸಿ ಸರ್ವರ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆಯ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವಿಶ್ವನಾಥ ಮುರುಡಿ ತಹಸೀಲ್ದಾರ್ ಕನಕಗಿರಿ