ಮಸ್ಕಿ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಲಿಕಾ ಹಬ್ಬ ಪೂರಕವಾಗಿದೆ ಎಂದು ಕೊಳಬಾಳ ಗ್ರಾಪಂ ಅಧ್ಯಕ್ಷ ಇ.ರಾಜೇಶ ಹೇಳಿದರು.
ಹಂಚಿನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ಮಕ್ಕಳಿಗಾಗಿ ಸರ್ಕಾರ ಪ್ರತಿಭಾ ಕಾರಂಜಿ, ಕ್ರೀಡಾಕೂಟ ಸೇರಿ ಇತರ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಇದರಿಂದ ಮಕ್ಕಳಲ್ಲಿರುವ ಪ್ರತಿಭೆ ಹಗೂ ದೈಹಿಕ ಸಾಮಾರ್ಥ್ಯ ತಿಳಿಯಲು ಸಾಧ್ಯವಾಗಿದೆ.
ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಣೆ ಬಗ್ಗೆ ಗಮನಹರಿಸಬೇಕು ಎಂದರು. ಸಿಆರ್‌ಪಿ ಜಗದೀಶ್, ಪ್ರಮುಖರಾದ ಹನುಮಂತಪ್ಪ ಬಡ್ಡಿವಡ್ಡರ, ಲಕ್ಷ್ಮಣ, ಷಣ್ಮುಖಗೌಡ, ದುರುಗಪ್ಪ, ನಿರುಪಾದೆಪ್ಪ, ಸುಧಾಕರ ರಾವ್, ಸುಬ್ಬಾರಾವ್, ವೀರಭದ್ರಗೌಡ, ಮರಿಯಪ್ಪ, ಮಲ್ಲರಡ್ಡೆಪ್ಪ, ಸಂಗಯ್ಯ ಸ್ವಾಮಿ ಇತರರಿದ್ದರು.