ಬೆಳಗಾವಿ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಎಂಎಲ್​ಸಿ ಮಹಾಂತೇಶ ಕವಟಗಿಮಠ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಪ್ರಕಾಶಾನಂದ ಸ್ವಾಮೀಜಿ, ವಾದಿರಾಜ ಕಲಟಗಿ, ಅನಿತಾ ಗಾವಡೆ ಇತರರಿದ್ದರು. 
ಜಿಲ್ಲೆ

ಶಿಕ್ಷಣಕ್ಕೆ ಸಿಗಬೇಕಿದೆ ಹೆಚ್ಚಿನ ಆದ್ಯತೆ - ಮಹಾಂತೇಶ ಕವಟಗಿಮಠ

ಸೋಮಲಿಂಗ ತಳವಾರ

ಬೆಳಗಾವಿ: ಯಾವ ಸಮಾಜ ಶಿಕ್ಷಣ ಪಡೆಯುತ್ತದೆಯೋ ಆ ಸಮಾಜ ಮುಂದುವರಿದ ಸಮಾಜವಾಗುತ್ತದೆ. ಆ ಹಿನ್ನೆಲೆಯಲ್ಲಿ ಶಿಕ್ಷಣಕ್ಕೆ ಬಹಳ ಆದ್ಯತೆ ಕೊಡಬೇಕಾಗಿದೆ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ನಗರದ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ ಹಳೇ ವಿದ್ಯಾಥಿಗಳ ಬಳಗ, ಬೆಳಗಾವಿ ಜಿಲ್ಲಾ ಅಂಧ ಸೇವಾ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 70ರ ದಶಕದಲ್ಲಿ ದಿ. ಎನ್​.ಆರ್​.ಕುಲಕರ್ಣಿ ಅವರು ಸಂಸ್ಥೆ ಹುಟ್ಟು ಹಾಕಿದರು. ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅವರಲ್ಲಿ ಅಡಗಿರುವಂತಹ ಪ್ರತಿಭೆ ಸಮಾಜಮುಖಿಯಾಗಿ ಹೊರಹೊಮ್ಮಬೇಕು ಎಂದರು.

ಡಾ.ಎಪಿಜೆ ಅಬ್ದುಲ್​ ಕಲಾಂ ಅವರು ತಮಿಳುನಾಡಿನ ಅತ್ಯಂತ ಸಣ್ಣ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿದರು. ಆದರೆ, ಅವರ ನಿರಂತರ ಪರಿಶ್ರಮ ಅವರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿತು. ಹಳ್ಳಿಯಲ್ಲಿ ಬಡತನದಲ್ಲಿ ಹುಟ್ಟಿರುವ ಒಬ್ಬ ಅಂಗವಿಕಲ ರಾಷ್ಟ್ರದ ಅತ್ಯುನ್ನತ ಸ್ಥಾನ ಹೊಂದಬೇಕೆನ್ನುವುದು ಪ್ರಧಾನಿ ಮೋದಿಜಿ ಆಶಯವಾಗಿದೆ. ಈ ಸಂಸ್ಥೆ ಉತ್ತರೋತ್ತರವಾಗಿ ಬೆಳಯಲಿ ಎಂದು ಹಾರೈಸಿದರು.

ಆರ್ಷ ವಿದ್ಯಾ ಆಶ್ರಮದ ಪ್ರಕಾಶಾನಂದ ಸ್ವಾಮೀಜಿ, ಮಾಹೇಶ್ವರಿ ಅಂಧಮಕ್ಕಳ ಶಾಲೆಯ ಅಧ್ಯಕ್ಷ ವಾದಿರಾಜ ಕಲಟಗಿ, ಅನಿತಾ ಗಾವಡೆ, ಆಡಳಿತ ಮಂಡಳಿ ಸದಸ್ಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.