ಜಿಲ್ಲೆ

ಡಾ.ಸಿ.ಕೆ.ನಾವಲಗಿಗೆ ಸೇವಾ ರತ್ನ ಪ್ರಶಸ್ತಿ

ರಾಘವೇಂದ್ರಗೌಡ ಭೀ ಪಾಟೀಲ್

ಗೋಕಾಕ: ಡಾ.ಶಿವಬಸವ ಸ್ವಾಮೀಜಿ ಅವರ 134ನೇ ಜಯಂತಿ ಸಂದರ್ಭದಲ್ಲಿ ಬೆಳಗಾವಿ-ನಾಗನೂರು ರುದ್ರಾಕ್ಷಿಮಠ ಕೊಡಮಾಡುವ 2023ನೇ ಸಾಲಿನ ರಾಜ್ಯಮಟ್ಟದ ‘ಸೇವಾ ರತ್ನ’ ಪ್ರಶಸ್ತಿಯನ್ನು ಸಾಹಿತಿ, ಜಾನಪದ ಚಿಂತಕ ಡಾ. ಸಿ.ಕೆ. ನಾವಲಗಿ ಅವರಿಗೆ ನೀಡಿ ಗೌರವಿಸಲು ಶ್ರೀಮಠ ನಿರ್ಧರಿಸಿದೆ.

ಪ್ರಶಸ್ತಿಯು 10,000 ರೂ. ನಗದು, ಪ್ರಶಸ್ತಿ ಲಕ ಒಳಗೊಂಡಿದ್ದು ಡಿ.8ರಂದು 10.30 ಗಂಟೆಗೆ ಶ್ರೀಮಠದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಡಾ.ಸಿ.ಕೆ.ನಾವಲಗಿ ‘ಚೆಂಬೆಳಕಿನ ಮಹಾಬೆಳಗು’ ಹೆಸರಿನ ಚೆನ್ನವೀರ ಕಣವಿ ಕುರಿತು ರಚಿಸಿದ ವಿಮರ್ಶಾ ಕತಿಯನ್ನು ಈ ಹಿಂದೆಯೇ ಶ್ರೀ ಮಠವು ಪ್ರಕಟಿಸಿ, ಕವಿ ಕಣವಿ ಅವರಿಂದಲೇ ಬಿಡುಗಡೆಗೊಳಿಸಿತ್ತು. ಕಣವಿ ಅವರಿಂದಲೇ ನಾವಲಗಿ ಅವರಿಗೆ 2017ರಲ್ಲಿ ಗೌರವ ಸನ್ಮಾನ ನೀಡಿದ್ದು ವಿಶೇಷವಾಗಿತ್ತು.