ಜಿಲ್ಲೆ

ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಭಕ್ತರ ನಿಲಯ ಉದ್ಘಾಟನೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಯಾತ್ರಿ ನಿವಾಸದ ಬಳಿ ನಿರ್ವಿುಸಲಾದ ಭಕ್ತರ ನಿಲಯವನ್ನು ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಗುರುವಾರ ಉದ್ಘಾಟಿಸಿದರು.

ಇದೇ ವೇಳೆ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಹೊಸದಾಗಿ 32 ಕೊಠಡಿಗಳು, 50 ಸ್ನಾನಗೃಹ ಹಾಗೂ 50 ಶೌಚಗೃಹಗಳ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಮುಖ್ಯ ಆಡಳಿತ ಕಚೇರಿಯ ನವೀಕರಣಕ್ಕೆ ಚಾಲನೆ ನೀಡಿದರು. ಗೋಕಾಕದ ಶ್ರೀ ಅತ್ಯಾನಂದ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು.

ಡಿ.ಆರ್.ಪಾಟೀಲ, ಟ್ರಸ್ಟ್ ಕಮಿಟಿಯ ವೈಸ್-ಚೇರ್ಮನ್ ಉದಯಕುಮಾರ ನಾಯ್ಕ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಕೆ.ಎಲ್.ಪಾಟೀಲ, ಶಾಮಾನಂದ ಪೂಜೇರಿ, ರಮೇಶ ಬೆಳಗಾವಿ, ಮಂಜುನಾಥ ಮುನವಳ್ಳಿ, ಬಾಳು ಮಗಜಿಕೊಂಡಿ, ಡಾ. ಗೋವಿಂದ ಮಣ್ಣೂರ, ಚನ್ನವೀರ ಮುಂಗುರವಾಡಿ, ಇತರರು ಇದ್ದರು.