Oplus_16777216 
ಜಿಲ್ಲೆ

ಅಭಿವೃದ್ಧಿಗೆ ನೀರೆರೆದ ನಿಂಬಾಳ್ಕರ್​

ಎಂ.ಎಸ್​.ಹಿರೇಮಠ ಬೆಳಗಾವಿ

ಖಾನಾಪುರ: ತಾಲೂಕು ಬ್ಲಾಕ್​ ಕಾಂಗ್ರೆಸ್​ ಪದ ವತಿಯಿಂದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್​ ಅವರ ಜನ್ಮದಿನವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟ್ಟಣದ ಶಿವಸ್ಮಾರಕ ಚೌಕದಲ್ಲಿ ಕೇಕ್​ ಕತ್ತರಿಸಿ ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಜನರಲ್ಲಿ ಸಾರಿಗೆ ನಿಯಮ ಹಾಗೂ ಸುರಕ್ಷತೆಯ ಅರಿವು ಮೂಡಿಸಲು ನೂರಾರು ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್​ ವಿತರಿಸಿದರು.

ಬ್ಲಾಕ್​ ಕಾಂಗ್ರೆಸ್​ ಅಧ್ಯ ಈಶ್ವರ್​ ಘಾಡಿ ಮಾತನಾಡಿ, ಡಾ.ಅಂಜಲಿ ನಿಂಬಾಳ್ಕರ್​ ಅವರು 2018 ರಿಂದ 2023 ರವರೆಗೆ ತಾಲೂಕಿನ ಶಾಸಕಿಯಾಗಿ ತಾಲೂಕಿನ ಸಮಗ್ರ ಅಭಿವದ್ಧಿಗೆ ನೀರೆರೆದು ಸಾರ್ವಜನಿಕರ ಮನದಲ್ಲಿ ಛಾಪು ಮೂಡಿಸಿದ್ದಾರೆ ಎಂದರು.

ಪ್ರಸ್ತುತ, ಅವರು ಗೋವಾ ಮತ್ತು ದಿಯು&ದಮನ್​ನ ಎಐಸಿಸಿ ಕಾರ್ಯದರ್ಶಿಯಾಗಿದ್ದಾರೆ. ತಾಲೂಕಿನಿಂದ ರಾಜಕೀಯ ಪ್ರಯಾಣ ಪ್ರಾರಂಭಿಸಿದ ಅವರು ಇಂದು ಕಾಂಗ್ರೆಸ್​ ಪದ ರಾಷ್ಟ್ರಮಟ್ಟದ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸಂಟನೆ ಹಾಗೂ ನಾಯಕತ್ವ ಗುಣಗಳಿಂದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಕಾಂಗ್ರೆಸ್​ ರಾಷ್ಟ್ರೀಯ ಅಧ್ಯ ಮಲ್ಲಿಕಾರ್ಜುನ ರ್ಖಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಹಿರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

ಖಾನಾಪುರ ತಾಲೂಕು ಬ್ಲಾಕ್​ ಕಾಂಗ್ರೆಸ್​ ಮಾಜಿ ಅಧ್ಯ ಮಹಾಂತೇಶ ರಾವುತ್​, ಅಲ್ಪಸಂಖ್ಯಾತ ಟಕದ ಅಧ್ಯಕ್ಷ ತೋಹಿತ್​ ಚಂದಕ್ನವರ ಸುರೇಶ ಜಾಧವ, ಸೂರ್ಯಕಾಂತ ಕುಲಕರ್ಣಿ, ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ, ಲಿಂಗನಮಠ ಗ್ರಾ.ಪಂ. ಅಧ್ಯ ಕಾಸೀಂ ಹಟ್ಟಿಹೊಳಿ, ಕಾಂಗ್ರೆಸ್​ ಮಹಿಳಾ ಟಕದ ಅಧ್ಯೆ ಸಾವಿತ್ರಿ ಮಾದರ, ದೀಪಾ ಪಾಟೀಲ, ಮಧು ಕಾವ್ಲೇಕರ್​, ದೀಪಕ ಕವಠಂಕರ, ಭರತೇಶ ತೊರೋಜಿ ಇತರರಿದ್ದರು.