ಸಿಂಧನೂರು: ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿಯಲ್ಲಿ ದೇವದಾಸಿಯರಿಗೆ ಭೂಮಿ ಮಂಜೂರಾಗಿದ್ದು ,ತಹಸೀಲ್ದಾರ್ ಅರುಣ್ ದೇಸಾಯಿ ಹಾಗೂ ಹಿರಿಯ ಉಪನೋಂದಣಾಧಿಕಾರಿ ಶ್ರೀನಿವಾಸ ಭಂಗಿ ಹಕ್ಕುಪತ್ರ ವಿತರಿಸಿದರು.
ಕರಿಯಮ್ಮ ತಂ. ಹನುಮಂತ ಮಾವಿನಮಡು, ದುರಗಮ್ಮ ತಂ. ದುರುಗಪ್ಪ ಜಾಲಿಹಾಳ, ಮರಿಯಮ್ಮ ತಂ. ಸೋಮಣ್ಣ ಜಾಲಿಹಾಳ, ಬುಜ್ಜಮ್ಮ ತಂ. ದುರುಗಪ್ಪ ರೌಡಕುಂದ, ಕರಿಯಮ್ಮ ತಂ. ಕೆಂಚಪ್ಪ ರೌಡಕುಂದ, ಶೇಖಮ್ಮ ತಂ. ನರಸಪ್ಪ ರೌಡಕುಂದ ಸೇರಿ ಒಟ್ಟು 6 ಜನ ವಿಮುಕ್ತ ದೇವದಾಸಿಯರಿಗೆ ತಲಾ ಒಂದೂವರೆ ಎಕರೆ ನೀರಾವರಿ ಭೂಮಿ ಮಂಜೂರು ಮಾಡಿ ಹಕ್ಕು ಪತ್ರ ನೀಡಿದರು.
ವಿಮುಕ್ತ ದೇವದಾಸಿ ಮಹಿಳೆ ವೇದಿಕೆಯ ತಾಲೂಕು ಅಧ್ಯಕ್ಷ ಮೌನೇಶ ವೈ.ಉಮಲೂಟಿ ಮಾತನಾಡಿ, ವಿಮುಕ್ತ ದೇವದಾಸಿಯರಿಗೆ ಸರ್ಕಾರ ಭೂಮಿ ವಿತರಣೆ ಮಾಡಿದ್ದು ಸಂತೋಷದ ಸಂಗತಿ. ಈ ಯೋಜನೆ ಸಾಕಾರಗೊಳ್ಳಲು ವಿಮುಕ್ತಿ ದೇವದಾಸಿ ವೇದಿಕೆಯ ರಾಜ್ಯ ಸಂಚಾಲಕ ಚಂದಾಲಿಂಗಪ್ಪ ಕಲಾಲ್ ಭಂಡಿ, ದಾನಪ್ಪ, ಸಿ.ಮಸ್ಕಿ, ಎಂ.ಆರ್ ಬೇರಿ, ರಾಜ್ಯ ಅಧ್ಯಕ್ಷೆ ಪಡೇಮ್ಮ ಗುಂಪಿ, ತಾಲೂಕು ಅಧ್ಯಕ್ಷೆ ಮೌನೇಶ, ವೈ ಉಮಲೂಟಿ, ವಿರುಪಮ್ಮ ದೋಟಿಹಾಳ ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದರ ಪ್ರತಿಫಲವಾಗಿ ದೇವದಾಸಿ ಮಹಿಳೆಯರಿಗೆ ಭೂಮಿ ದೊರಕಿದೆ ಎಂದರು.