ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಸ್ತೆ ಕಾಮಗಾರಿ ಹಾಗೂ ಮಕ್ಕಳಿಗೆ ಬಟ್ಟೆ ಒಣಗಿಸುವ ಶೆಡ್ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು. ಬಿಂದು, ಬಿನು, ರಚಿತಾ, ಎನ್.ಡಿ.ಪ್ರಸಾದ್, ಅಣ್ಣಪ್ಪ ಇತರರಿದ್ದರು.  
ಜಿಲ್ಲೆ

ರಸ್ತೆ, ಶೆಡ್ ನಿರ್ಮಾಣಕ್ಕೆ ರೂ. 19 ಲಕ್ಷ ಬಿಡುಗಡೆ

ಎನ್.ಆರ್.ಪುರ: ಮುರಾರ್ಜಿ ದೇಸಾಯಿ ವಸತಿ ಶಾಲೆಯ ರಸ್ತೆ ಕಾಮಗಾರಿಗೆ 11.50 ಲಕ್ಷ ರೂ., ಬಟ್ಟೆ ಒಣಗಿಸುವ ಶೆಡ್‌ಗೆ 7.76 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದ ರಸ್ತೆ ಕಾಮಗಾರಿ ಹಾಗೂ ಮಕ್ಕಳಿಗೆ ಬಟ್ಟೆ ಒಣಗಿಸುವ ಶೆಡ್ ನಿರ್ಮಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸರ್ಕಾರ ಎಲ್ಲರಿಗೂ ಶಿಕ್ಷಣ ನೀಡುವ ಸಲುವಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ. ಸಾಧಕರ ಹೆಸರಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಸತಿ ಶಾಲೆಗಳಿಗೆ ಅನುದಾನ ನೀಡಲಾಗುತ್ತಿದೆ. ಈ ವಷರ್ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಅನುದಾನ ನೀಡಲು ತೀರ್ಮಾನಿಸಿದ್ದೇವೆ ಎಂದರು.
ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಯುಪಿಎಸ್ ಅಗತ್ಯವಿದೆ. ಗುಜರಾತ್ ಮಾದರಿ ಬಾಯ್ಲರ್ ಅಳವಡಿಸಲಾಗಿದೆ. ಸುತ್ತಮುತ್ತಲಿನ ರೈತರು ತೋಟದ ಸೌದೆಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ವಸತಿ ಶಾಲೆ ಪ್ರಾಚಾರ್ಯೆ ಪೂರ್ಣಿಮಾ, ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು, ಉಪಾಧ್ಯಕ್ಷೆ ಪಚ್ಚೆಯಮ್ಮ, ಸದಸ್ಯರಾದ ವಿ.ಜೆ.ಬಿನು, ಶ್ರೀನಾಥ್, ರಚಿತಾ, ಅಣ್ಣಪ್ಪ, ಆಸ್ಮೀನ್, ಎನ್.ಡಿ.ಪ್ರಸಾದ್ , ಪ್ರವೀಣ್, ಕಡಹಿನಬೈಲು ಗ್ರಾಪಂ ಸದಸ್ಯ ಸುನೀಲ್, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ಇತರರಿದ್ದರು.