filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41; 
ಜಿಲ್ಲೆ

ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕ ತರಿಸಿಕೊಡಿ

ಕೌಜಲಗಿ: ಸ್ಥಳಿಯ ಗ್ರಂಥಾಲಯ ಶತಮಾನ ಕಂಡರೂ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪುಸ್ತಕಗಳೇ ಇಲ್ಲಿಲ್ಲ ಎಂದು ವಿದ್ಯಾರ್ಥಿಗಳು ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಶುರಾಮ ಇಟ್ಟಗೌಡರ, ಅಧ್ಯಕ್ಷ ರಾಮಣ್ಣ ಈಟಿಗೆ ಸೋಮವಾರ ಮನವಿ ಸಲ್ಲಿಸಿದರು.

ಗ್ರಂಥಾಲಯ ನವೀಕರಣಗೊಂಡು ಡಿಜಿಟಲ್​ ಸ್ಪರ್ಶ ಪಡೆದಿದೆ. ನಿತ್ಯ ಬಹಳಷ್ಟು ಓದುಗರು ಬರುತ್ತಾರೆ. ಅವರಿಗೆ ಇಲ್ಲಿ ದಿನಪತ್ರಿಕೆಗಳು ಬಿಟ್ಟರೆ ಮತ್ತೇನೂ ಸಿಗುವುದಿಲ್ಲ. ಗ್ರಾಮದಲ್ಲಿ ಆರು ಪ್ರೌಢಶಾಲೆ, 5 ಪ್ರಾಥಮಿಕ ಹಾಗೂ ಒಂದು ವಸತಿ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಇದ್ದರೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ನೇಮಕ ಮಾಡಲಾಗಿರುವ ತಾತ್ಕಾಲಿಕ ಸಿಬ್ಬಂದಿ ಸಂಜೆ 4ರಿಂದ 7 ಗಂಟೆ ವರೆಗೆ ಮಾತ್ರ ಗ್ರಂಥಾಲಯ ತೆಗೆಯುತ್ತಾರೆ ಎಂದು ಆರೋಪಿಸಿದರು. ವೆಂಕಟೇಶ ದಳವಾಯಿ, ಹೊಳೆಪ್ಪ ಲೋಕಣ್ಣವರ, ಶಂಕರ ಜ್ಯೋತೆನ್ನವರ, ಅಶೋಕ ಯಲಿಗಾರ, ರಮೇಶ ಮುನ್ಯಾಳ ಇತರರಿದ್ದರು.