ಸಿರಗುಪ್ಪದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ಅಧಿಕಾರಿ ಚಂದ್ರಶೇಖರ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಎಡಿ ಎಂ.ಸಿದ್ದಯ್ಯ, ಕೆಕೆಆರ್‌ಟಿಸಿ ಘಟಕ ಅಧಿಕಾರಿ ಕೆ.ಎಂ.ತಿರುಮಲೇಶ, ನಿಲಯ ಮೇಲ್ವಿಚಾರಕಿ ಅಮರೇಶ್ವರಿ ಇದ್ದರು. 
ಜಿಲ್ಲೆ

ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ಅಭ್ಯಾಸ ಅಗತ್ಯ

ಸಿರಗುಪ್ಪ: ಉತ್ತಮ ಭವಿಷ್ಯ ರೂಪಿಸುವ ಶಿಕ್ಷಣ ಪಡೆದಾಗ ಮಾತ್ರ ಜೀವನ ಚರಿತ್ರೆಯಾಗುತ್ತದೆ ಎಂದು ಸಂಪನ್ಮೂಲ ಅಧಿಕಾರಿ ಚಂದ್ರಶೇಖರ ಹೇಳಿದರು.

ಇಲ್ಲಿನ ಸಿದ್ದಪ್ಪನಗರದ ಡಾ.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ದ್ವಿತೀಯ ಪಿಯುಸಿ ಮುಗಿಸಿದ ನಂತರ ಕನಿಷ್ಠ 8 ತಾಸು ದಿನಪತ್ರಿಕೆ, ಸ್ಫಾರ್ಧಾತ್ಮಕ ಪುಸ್ತಕಗಳನ್ನು ಅಭ್ಯಾಸ ಮಾಡಿದಲ್ಲಿ ಉನ್ನತ ಹುದ್ದೆ ಪಡೆಯಲು ಸಾಧ್ಯ ಎಂದರು.

ಸಮಾಜ ಕಲ್ಯಾಣ ಇಲಾಖೆ ಎಡಿ ಎಂ.ಸಿದ್ದಯ್ಯ, ಕೆಕೆಆರ್‌ಟಿಸಿ ಘಟಕ ಅಧಿಕಾರಿ ಕೆ.ಎಂ.ತಿರುಮಲೇಶ, ನಿಲಯ ಮೇಲ್ವಿಚಾರಕರಾದ ಅಮರೇಶ್ವರಿ, ದಾವಲ್ ಸಾಬ್, ಮುಖಂಡ ನಾಗಯ್ಯ ಸ್ವಾಮಿ ಇದ್ದರು.