ಕಂಪ್ಲಿ: ಭೋವಿ ಸಮುದಾಯ ಭವನ ನಿರ್ಮಾಣ ಪೂರ್ಣಗೊಳಿಸಲು 10 ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಲು ಶಾಸಕರು ಮುಂದಾಗಬೇಕು ಎಂದು ಕಂಪ್ಲಿ ತಾಲೂಕು ಭೋವಿ ಸಂಘದ ಅಧ್ಯಕ್ಷ ಸಾಮಿಲ್ ವಿ.ಶೇಖಪ್ಪ ಒತ್ತಾಯಿಸಿದರು.
ಇಲ್ಲಿನ ಭೋವಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಸಿದ್ದ ಕಂಪ್ಲಿ ತಾಲೂಕು ಭೋವಿ ಸಂಘದ ಮಹಾಜನಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇದನ್ನೂ ಓದಿ:ಶೌಚಗೃಹ ಇಲ್ಲದೆ ಪ್ರಯಾಣಿಕರು ಹೈರಾಣ
ಸಮುದಾಯ ಭವನದಲ್ಲಿ ಶೌಚಗೃಹ, ಆವರಣಗೋಡೆ, ಸ್ಟೇರ್‌ಕೇಸ್ ನಿರ್ಮಿಸಬೇಕಿದೆ. ಸಮುದಾಯ ಭವನದ ರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಿದೆ. ಭವನದ ಅಭಿವೃದ್ಧಿಗೆ ಶಾಸಕರು 10 ಲಕ್ಷ ರೂ. ಒದಗಿಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಭೋವಿ ಸಮಾಜದ ಅಭಿವೃದ್ಧಿ ಮತ್ತು ಸಂಘಟನೆಗಾಗಿ ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಸಂಘದ ಗೌರವಾಧ್ಯಕ್ಷ ವಿ.ಗೋವಿಂದರಾಜ ಯಂಕಪ್ಪ, ಪದಾಧಿಕಾರಿಗಳಾದ ವಿ.ಸತ್ಯಪ್ಪ, ವಿ.ಶರಭಣ್ಣ, ವಿ.ನೀಲಕಂಠೇಶ, ಎಸ್.ವಿ.ಶ್ರೀನಿವಾಸ, ವಿ.ಗುರಪ್ಪ, ವಿ.ತಿಪ್ಪೇಸ್ವಾಮಿ ಹುಲುಗಪ್ಪ, ವಿ.ವೆಂಕಟರಮಣ ತಿಪ್ಪಣ್ಣ, ಮಂಡಾಳು ಹುಲುಗಪ್ಪ, ವಿ.ಬಿ.ಸೋಮನಾಥ, ವಿ.ವೆಂಕಟರಮಣ, ವಿ.ಸಣ್ಣಮೂಕಪ್ಪ, ವಿ.ಗೋವಿಂದಪ್ಪ, ವಿ.ತಿಪ್ಪೇಸ್ವಾಮಿ ಯಂಕಪ್ಪ, ವಿ.ಕುಣಕೇರಿ ವೆಂಕಟೇಶ ಇತರರಿದ್ದರು.