ಜಿಲ್ಲೆ

ಸಹಕಾರಿಗೆ ಆನಂದ ಕೊಡುಗೆ ಅಪಾರ

ಎಂ.ಎಸ್​.ಹಿರೇಮಠ ಬೆಳಗಾವಿ

ಮುನವಳ್ಳಿ: ಬಿಡಿಸಿಸಿ ಬ್ಯಾಂಕ್​ ನಿರ್ದೇಶಕರಾಗಿದ್ದ ಆನಂದ ಮಾಮನಿ ಅವರು ಸವದತ್ತಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸಹಕಾರಿ ಸಂಗಳನ್ನು ಸ್ಥಾಪಿಸಿ ರೆತರ ಅಭಿವದ್ಧಿಗೆ ನೆರವಾಗಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್​ ನಿರ್ದೇಶಕಿ ರತ್ನಕ್ಕ ಮಾಮನಿ ಹೇಳಿದರು.

ಸಮೀಪದ ಶಿಂದೋಗಿ ಗ್ರಾಮದಲ್ಲಿ ಶ್ರೀ ಲೋಕೇಶ್ವರಿ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಆನಂದ ಅವರು ಕ್ಷೇತ್ರದ ಕಷಿ ಅಭಿವದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸಂವನ್ನು ಪ್ರಗತಿಪಥದಲ್ಲಿ ನಡೆಸುತ್ತ ಸ್ವಂತ ಕಟ್ಟಡ ಹೊಂದುವತ್ತ ಹೆಜ್ಜೆ ಹಾಕಿರುವುದು ಶ್ಲಾನೀಯ ಎಂದರು.

ಮಡಿವಾಳಯ್ಯ ಹಿರೇಮಠ, ಈರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸವದತ್ತಿ ತಾಲೂಕು ಬಿಜೆಪಿ ಮಂಡಲದ ಅಧ್ಯ ವಿರೂಪಾ ಮಾಮನಿ, ಸಂದ ಅಧ್ಯ ವಿ.ಎಚ್​. ಪಾಟೀಲ, ಉಪಾಧ್ಯ ಯಲ್ಲಪ್ಪ ಪಾಂಡ್ರೆ, ನಿರ್ದೇಶಕರಾದ ಎಚ್​.ಆರ್​. ತೋರಣಗಟ್ಟಿ, ಮದನ್​ರಾವ್​ ಶಿಂಧೆ, ಮಾರುತಿ ಕಾತ್ರಾಳ, ಮಹಾಂತೇಶ ಕುರಬಗಟ್ಟಿ, ಅನಿಲ ಕದಂ, ಗಂಗವ್ವ ಅಡವಿ, ಮಲ್ಲವ್ವ ಚಂದರಗಿ, ಶಿವಾನಂದ ಭಜಂತ್ರಿ, ಮಹಾದೇವಪ್ಪ ತಳವಾರ, ಬ್ಯಾಂಕ್​ ನಿರೀಕ ಎಸ್​.ಎಸ್​. ಸಿದ್ದನ್ನವರ, ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಐನಾಪುರ, ಜಿ.ಬಿ.ಕುರಬಗಟ್ಟಿ, ಬಿ.ಸಿ. ಮೇಟಿ, ಶಿವಪ್ಪ ಕುರಬಗಟ್ಟಿ, ಮಹಾಂತೇಶ ಯಕ್ಕೇರಿ, ಶೇಖರ ಗೋಕಾಂವಿ, ಸತ್ಯಪ್ಪ ಅಡವಿ, ಸುರೇಶ ನಡನಳ್ಳಿ, ಅಪ್ಪು ನುಗ್ಗಾನಟ್ಟಿ, ಬಾಳಪ್ಪ ಮೇಟಿ, ಐ.ಬಿ. ಮೇಟಿ, ಪ್ರಕಾಶ ಪಾಟೀಲ, ಕುಮಾರಸ್ವಾಮಿ ತಲ್ಲೂರಮಠ ಇತರರು ಇದ್ದರು.