ಹಾಸನ: ಇಲ್ಲಿನ ಮಹಾನಗರ ಪಾಲಿಕೆ ಕುವೆಂಪು ಸಭಾಂಗಣದಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪೌರಕಾರ್ಮಿಕರಿಗೆ ಬಾಗಿನ ನೀಡಿ ಶುಭಕೋರಿದರು.
ಗೌರಿ-ಗಣೇಶ ಹಬ್ಬವನ್ನು ಅರ್ಥ ಗರ್ಭಿತವಾಗಿ ಆಚರಿಸುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದಕ್ಕೆ ನಮ್ಮ ಹಿಂದು ಸಂಪ್ರದಾಯದಲ್ಲಿ ಅದರದೇ ಆದ ಗೌರವವಿದೆ. ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಕೊಡುಗೆ ಅಪಾರ ಇದ್ದು, ಹಂತ ಹಂತವಾಗಿ ಪೌರಕಾರ್ಮಿಕರ ಸಮಸ್ಯೆ ಬಗೆಹರಿಸಲಾಗುವುದು. ಕಳೆದ ಸಭೆಯಲ್ಲಿ ಕಾರ್ಮಿಕರ ನಿವೇಶನ ಬಗ್ಗೆ ಚರ್ಚೆ ಮಾಡಲಾಗಿದೆ ಎಂದರು.
ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿದ ಬಳಿಕ ಪುರುಷ ಕಾರ್ಮಿಕರಿಗೂ ಬಟ್ಟೆ ನೀಡಿ ಶುಭ ಕೋರಲಾಯಿತು. ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಇಂಜಿನಿಯರ್ ಚನ್ನೇಗೌಡ ಇತರರು ಇದ್ದರು.