ರಾಯಬಾಗ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಶಾಸಕ ಡಿ.ಎಂ. ಐಹೊಳೆ ಅವರು ಆಹಾರ ಕಿಟ್ ವಿತರಿಸಿದರು. ಎಸ್.ಆರ್.ಮಾಂಗ, ಅಣ್ಣಾಸಾಬ ಖೆಮಲಾಪುರೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಮಹಾದೇವ ಬೊರಗಾಂವೆ, ಗಿರೀಶ ಪಾಟೀಲ ಇತರರು ಇದ್ದರು. 
ಜಿಲ್ಲೆ

ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ರಾಯಬಾಗ: ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸುತ್ತಿರುವ ಪೌರಕಾರ್ಮಿಕರು, ನಿರ್ಗತಿಕರು ಹಾಗೂ ಕಡು ಬಡವರಿಗೆ ಆಹಾರ ಕಿಟ್ ನೀಡಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ರಾಯಬಾಗ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ಹಾಗೂ ಭಿರಡಿ, ಜಲಾಲಪುರ, ನಸಲಾಪುರ, ನಂದಿಕುರಳಿ ಮತ್ತು ಯಡ್ರಾಂವ ಗ್ರಾಮಗಳ ಕಡು ಬಡವರಿಗೆ ಮತ್ತು ನಿರ್ಗತಿಕರಿಗೆ ಗುರುವಾರ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. ರಾಯಬಾಗ ಮತಕ್ಷೇತ್ರದಲ್ಲಿ ಅಕ್ಕಿ, ಸಕ್ಕರೆ, ಬೇಳೆ, ಎಣ್ಣೆ, ಉಪ್ಪು, ಟೀ ಪೌಡರ್ ಹಾಗೂ ಸೋಪು ಸೇರಿ 4 ಸಾವಿರ ಆಹಾರ ಕಿಟ್‌ಗಳನ್ನು ವೈಯಕ್ತಿಕವಾಗಿ ವಿತರಿಸಲಾಗುತ್ತಿದೆ. ಅಲ್ಲದೆ, ಕಷ್ಟ ಹೇಳಿಕೊಂಡು ಮನೆಗೆ ಬರುತ್ತಿರುವ ಕ್ಷೇತ್ರ ಎಲ್ಲ ಜನರಿಗೆ ಅವಶ್ಯಕವಾಗಿರುವ ಜೀವನಾಂಶಕ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದರು.

ರಾಯಬಾಗ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಇಂಜಿನಿಯರ್ ಎಸ್.ಆರ್. ಚೌಗಲಾ, ಅಣ್ಣಾಸಾಬ ಖೆಮಲಾಪುರೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಮಹಾದೇವ ಬೊರಗಾಂವೆ, ಗಿರೀಶ ಪಾಟೀಲ, ಅರುಣ ಐಹೊಳೆ, ಮಹೇಶ ಕರಮಡಿ, ವಿ.ಆರ್.ಬಳ್ಳಾರಿ ಇತರರು ಇದ್ದರು.