ಹಿರೇಬಾಗೇವಾಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಸ್ಮಿತಾ ಪಾಟೀಲ ಉದ್ಘಾಟಿಸಿದರು. ಸತೀಶ ನಾಯ್ಕ, ಸುರೇಶ ಇಟಗಿ, ಗಂಗಾ ಪಾಟೀಲ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲಿ

ಶಂಕರ ಗೆಜ್ಜಿ

ಹಿರೇಬಾಗೇವಾಡಿ: ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸಿ ಸಂಸ್ಕಾರವಂತರನ್ನಾಗಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಗ್ರೂಪ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಜಿ. ವಾಲಿಇಟಗಿ ಹೇಳಿದರು.

ಇಲ್ಲಿನ ಶಿವಾಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬಿ.ಸಿ.ಟ್ರಸ್ಟ್ ಹಿರೇಬಾಗೇವಾಡಿ ಮತ್ತು ಬ್ಯಾಂಕ್ ಆ್ ಮಹಾರಾಷ್ಟ್ರ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸುಜ್ಞಾನನಿಧಿ ಶಿಷ್ಯವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಜನಜಾಗತಿ ಸಮಿತಿ ಸದಸ್ಯ ಸುರೇಶ ಇಟಗಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿ ಮೂಡಿಸಿ ಜನರಿಗೆ ಅನುಕೂಲಕರವಾಗಿವೆ ಎಂದರು. ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಸುಜ್ಞಾನನಿಧಿ ಮಾತನಾಡಿದರು. 62 ಲಾನುಭವಿಗಳಿಗೆ ಶಿಷ್ಯವೇತನ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಸ್ಮಿತಾ ಪಾಟೀಲ ಉದ್ಘಾಟಿಸಿದರು. ಸುರೇಶ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಎಎಸ್‌ಐ ಉದಯ ಪಾಟೀಲ, ಡಾ.ಎ್.ಎಸ್.ಪಾಟೀಲ, ಚಂದ್ರಪ್ಪ ಶಿಂತ್ರಿ, ಯೋಜನಾಧಿಕಾರಿ ಯೋಗೀಶ, ಗಂಗಾ ಪಾಟೀಲ, ಮಹಾದೇವಿ ಇಂಚಲ ಇತರರು ಇದ್ದರು.