ನಗರದ ಶೇಖ ಕಾಲೇಜ್ ಆಪ್ ಎಜುಕೇಶನ್ ಮಹಾ ವಿದ್ಯಾಲಯದಲ್ಲಿ ವಿಜ್ಞಾನ ಮತ್ತು ಗಣಿತ ರಸಪ್ರಶ್ನೆ ಸ್ಪರ್ಧೆ ಜರುಗಿತು. ಡಾ.ನಿರ್ಮಲಾ, ಇಮ್ರಾನ್ ನಿಬಂದ್‌ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ರಸಪ್ರಶ್ನೆ ಸ್ಪರ್ದೆ ಸಹಕಾರಿ

ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಗುಣಮಟ್ಟ ಹೆಚ್ಚಿಸಲು ರಸಪ್ರಶ್ನೆ ಕಾರ್ಯಕ್ರಮ ಸಹಕಾರಿ ಎಂದು ಶೇಖ ಕಾಲೇಜ್ ಆಪ್ ಎಜುಕೇಶನ್‌ನ ಪ್ರಾಂಶುಪಾಲ ಡಾ.ಇಂದಿರಾ ಸುತಾರ ಅಭಿಪ್ರಾಯಪಟ್ಟರು. ನಗರದ ಶೇಖ ಕಾಲೇಜ್ ಆಪ್ ಎಜುಕೇಶನ್ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿಗಳ ಬೌದ್ಧಿಕ ಬೆಳವಣಿಗೆಗಾಗಿ ವಿಜ್ಞಾನ ಮತ್ತು ಗಣಿತ ಕ್ಲಬ್ ವತಿಯಿಂದ ಈಚೆಗೆ ಆಯೋಜಿಸಿದ್ದ ಅಂತರ ಕಾಲೇಜು ವಿಜ್ಞಾನ ಮತ್ತು ಗಣಿತ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜ್ಞಾನ ಮತ್ತು ಗಣಿತ ಕ್ಲಬ್ ಪ್ರಭಾರಿ ಡಾ.ನಿರ್ಮಲಾ ತೇಲಿ, ಇಮ್ರಾನ್ ನಿಬಂದ್, ಉಷಾ ಬಸವಗೋಳ, ಗೌರಿ ಕಾಕತ್ಕರ್ ಇತರರಿದ್ದರು.