ಉಳ್ಳಾಗಡ್ಡಿ-ಖಾನಾಪುರ ಗ್ರಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಯೋಜಕ ಚನ್ನಮಲ್ಲ ಪಾಟೀಲ ಮಾತನಾಡಿದರು. ಪದ್ಮನ್ನವರ, ಚಂದ್ರಕಾಂತ ಪಾಟೀಲ, ಕಲ್ಲಪ್ಪ ಕುರಣಿ, ಮಹಾರುದ್ರ ಜರಳಿ, ರಾಜು ಅವಟೆ ಇದ್ದರು. 
ಜಿಲ್ಲೆ

ದನಕರುಗಳಿಗೆ ಶೆಡ್ ನಿರ್ಮಿಸುವ ಭರವಸೆ

ಪ್ರಶಾಂತ ಹೂಗಾರ

ಉಳ್ಳಾಗಡ್ಡಿ-ಖಾನಾಪುರ: ಪ್ರಸಕ್ತ 2023-24ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮೊತ್ತ 64,73,000 ರೂ. ಹಾಗೂ ಸಾಮಗ್ರಿ ಮೊತ್ತ 34,16,000 ರೂ.

ವ್ಯಯಿಸಲಾಗಿದೆ. ಸರ್ಕಾರ ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿ ತಂದಿದೆ ಎಂದು ಸಂಯೋಜಕ ಚನ್ನಮಲ್ಲ ಪಾಟೀಲ ಹೇಳಿದರು.

ಉಳ್ಳಾಗಡ್ಡಿ-ಖಾನಾಪುರ ಗ್ರಾಪಂನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದನಕರುಗಳು ಹಾಗೂ ಕುರಿಗಳಿಗೆ ಶೆಡ್‌ಗಳು, ತೋಟಕ್ಕೆ ಹೋಗಲು ರಸ್ತೆಗಳನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಮುಂಬರುವ ದಿನಗಳಲ್ಲಿ ಯೋಜನೆ ರೂಪಿಸಿ

ಅನುಮೋದನೆ ಪಡೆದು ದನಗಳ ಶೆಡ್ ನಿರ್ಮಿಸುವ ಯೋಜನೆ ಪ್ರಾರಂಭಿಸುವುದಾಗಿ ಪಿಡಿಒ ಭರವಸೆ ನೀಡಿದರು.

ನೋಡಲ್ ಅಧಿಕಾರಿಯಾಗಿ ಎ.ಎಸ್.ಪದ್ಮನ್ನವರ ಆಗಮಿಸಿದ್ದರು. ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಪಿಡಿಒ ಕಲ್ಲಪ್ಪ ಕುರಣಿ, ಗ್ರಾಪಂ ಸದಸ್ಯರಾದ ಮಹಾರುದ್ರ ಜರಳಿ, ರಾಜು ಅವಟೆ, ಸುಧೀರ ಗಿರಿಗೌಡರ, ಮಲ್ಲಪ್ಪ ಮಾಳಗಿ, ಸಚಿನ ಸುರ್ವೆ, ಕಾರ್ಯದರ್ಶಿ ವಸಂತ ಬಡೀಗೇರ, ಗ್ರಾಮಸ್ಥರು ಇದ್ದರು.