ಬಸ್ತವಾಡ ಗ್ರಾಮದಲ್ಲಿ ಮತ್ತೊಂದು ಬಸ್ ಬಿಡುವುದಾಗಿ ಸಹಾಯಕ ಸಂಚಾರಿ ನಿಯಂತ್ರಕ ಎಂ.ಕೆ ದಾಮೋಜಿ ಅವರು ಪ್ರತಿಭಟನೆ ನಿರತ ವಿದ್ಯಾರ್ಥಿಗಳಿಗೆ ಲಿಖಿತ ಭರವಸೆ ಕೊಟ್ಟರು. 
ಜಿಲ್ಲೆ

ಬಸ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಶಾಂತ ಹೂಗಾರ

ಅಳಗವಾಡಿ: ಸಮಯಕ್ಕೆ ಸರಿಯಾಗಿ ಬಸ್ ಬಾರದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಮಂಗಳವಾರ ಬಸ್ತವಾಡ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟಿಸಿದರು

ಇಟ್ನಾಳ, ಖನದಾಳ, ಸವಸುದ್ದಿ, ಬಸ್ತವಾಡ, ಅಳಗವಾಡಿ ಮಾರ್ಗವಾಗಿ ಕಮಲದಿನ್ನಿ- ರಾಯಬಾಗ ಒಂದು ಬಸ್ ಮಾತ್ರ ಸಂಚರಿಸುತ್ತದೆ. ಇದರಲ್ಲೇ ನೂರಾರು ವಿದ್ಯಾರ್ಥಿಗಳು ಚಿಕ್ಕೋಡಿ, ರಾಯಬಾಗ, ಹಾರೂಗೇರಿ ಪಟ್ಟಣಗಳಿಗೆ ಶಾಲಾ- ಕಾಲೇಜುಗಳಿಗೆ ತೆರಳುತ್ತಾರೆ. ಆದರೆ ಕೆಲವು ತಿಂಗಳಿಂದ ಬಸ್ ಸರಿಯಾಗಿ ಬಾರದ್ದರಿಂದ ತರಗತಿಗೆ ಹೋಗಲು ತೊಂದರೆಯಾಗಿದೆ ಎಂದು ಆರೋಪಿಸಿದರು. ಬಸ್ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಸಂಬಂಧಿತ ಅಧಿಕಾರಿಗೆ ಮನಿವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ಘಟಕ ವ್ಯವಸ್ಥಾಪಕರು ಸ್ಥಳಕ್ಕೆ ಬರವಂತೆ ವಿದ್ಯಾರ್ಥಿಗಳಿಂದ ಪಟ್ಟು ಹಿಡಿದರು. ಇದರಿಂದ ಸ್ಥಳಕೆ ಬಂದ ಸಹಾಯಕ ಸಂಚಾರಿ ನಿಯಂತ್ರಕ ಎಂ.ಕೆ ದಾಮೋಜಿ ಶುಕ್ರವಾರದಿಂದ ಮತ್ತೊಂದು ಬಸ್ ಬಿಡುತ್ತೇವೆ ಎಂದು ಲಿಖಿತವಾಗಿ ಬರೆದು ಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಸಂದೀಪ ಕಾಂಬಳೆ, ಗಾಯತ್ರಿ ಬೇಟಗೇರಿ ಇತರರಿದ್ದರು.