ಸಂಡೂರು: ಸಂಡೂರು ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಬಿಜೆಪಿಯವರು ಮ್ಯಾಜಿಕ್ ನಂಬಿದವರು. ನಾವು ವಾಸ್ತವವನ್ನು ನೆಚ್ಚಿಕೊಂಡಿದ್ದೇವೆ. ನಮಗೆ ಸಂವಿಧಾನದ ಮೇಲೆ ನಂಬಿಕೆ ಇದೆ. ಅವರು 5 ವರ್ಷಕೊಮ್ಮೆ ಬಂದು ಹೀಗೆ ಮ್ಯಾಜಿಕ್ ಮಾಡಿ ಹೋಗುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಲೇವಡಿ ಮಾಡಿದರು.
ಕೃಷ್ಣಾನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯವರಿಗೆ ಸುಳ್ಳು ಹೇಳೋದೆ ಕೆಲಸವಾಗಿದೆ. ಸಂಡೂರಲ್ಲಿ ತುಕಾರಾಮ್ ಅವಧಿಯಲ್ಲಿ ನಿರ್ಮಿಸಿದ ರಸ್ತೆಗಳನ್ನು ನಾವು ಮಾಡಿದ್ದೇವೆ ಅಂತ ಜನಾರ್ದನ ರೆಡ್ಡಿ ಹೇಳುತ್ತಾರೆ.
ಆದರೆ ಅವರು ಕರೆದ ಟೆಂಡರ್ ಏನಾಯಿತು, ಬ್ಲಾಕ್ ಲಿಸ್ಟ್‌ಗೆ ಹೇಗೆ ಹೋಯಿತು? ಎಂಬುದು ಗೊತ್ತಿದೆ. ಈ ರಸ್ತೆಗಳು ಯಾರು ಮಾಡಿದ್ದು ಅಂತ ಜನರಿಗೆ ಅವರು ಹೇಳಲಿ. ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತಗಳ ಲೀಡ್‌ನಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಸಂಸದ ಈ.ತುಕಾರಾಮ್ ಮಾತನಾಡಿದರು.