ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ ರಸ್ತೆಯ ಕಾಮಗಾರಿಯನ್ನು ಶಾಸಕಿ ಶಶಿಕಲಾ ಜೊಲ್ಲೆ ವೀಕ್ಷಿಸಿದರು. ಶ್ರೀಕಾಂತ ಕಣಗಲೆ, ವಿಜಯ ಪಾಟೀಲ, ಸುಧಾಕರ ಚೌಗುಲೆ, ಸಂಜಯ ಖೋತ, ಸಂಜಯ ಪಾಟೀಲ, ಸಾಗರ ಪವಾರ ಇದ್ದರು. 
ಜಿಲ್ಲೆ

ತಡೆಗೋಡೆಗೆ ಹೆಚ್ಚುವರಿ 2.84 ಕೋಟಿ ರೂ.

ಪ್ರಶಾಂತ ಹೂಗಾರ

ನಿಪ್ಪಾಣಿ: ತಾಲೂಕಿನ ದೂಧಗಂಗಾ-ವೇದಗಂಗಾ ನದಿಗಳ ಸಂಗಮ ಸ್ಥಳದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿರುವ ಕುನ್ನೂರ-ಬಾರವಾಡ ರಸ್ತೆಯ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ಹೆಚ್ಚುವರಿಯಾಗಿ 2.84 ಕೋಟಿ ರೂ. ಅನುದಾನಕ್ಕೆ ಅನುಮೋದನೆ ದೊರೆತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಗುರುವಾರ ರಸ್ತೆ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು. ಜಲಪ್ರವಾಹಕ್ಕೆ ರಸ್ತೆ ಮೇಲಿನ ಕಟ್ಟೆ ಕೊಚ್ಚಿ ಹೋದ ಪರಿಣಾಮ ಸಂಚಾರ ಅಪಾಯಕಾರಿಯಾಗಿತ್ತು. ಒಟ್ಟು 5.84 ಕೋಟಿ ರೂ. ಅನುದಾನದ ಕಾಮಗಾರಿಯಿಂದ ರಸ್ತೆ ಸಂಚಾರ ಸುಗಮವಾಗಲಿದೆ. ರಸ್ತೆಯಲ್ಲಿ ಪ್ರಯಾಣಿಸುವುದರಿಂದ ಜನರಿಗೆ ಸುಮಾರು 7 ಕಿಮೀ ಅಂತರ ಕಡಿಮೆಯಾಗಲಿದೆ. ಜತೆಗೆ ವಾಹನ ದಟ್ಟಣೆ ನಿಯಂತ್ರಿಸಲು ಸಹಕಾರಿಯಾಗಲಿದೆ. ಕಾಮಗಾರಿ ಮಾಡುವಾಗ ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆಯನ್ನೂ ವಹಿಸಲಾಗಿದೆ. ಶೀಘ್ರ ರೈತರ ಸಭೆ ಕರೆದು ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಶ್ರೀಕಾಂತ ಕಣಗಲೆ, ವಿಜಯ ಪಾಟೀಲ, ಸುಧಾಕರ ಚೌಗುಲೆ, ಸಂಜಯ ಖೋತ, ಸಂಜಯ ಪಾಟೀಲ, ಸಾಗರ ಪವಾರ, ಧನಾಜಿ ಹಜಾರೆ, ಭಾಗೋಜಿ ಧನಗರ, ಪಿಂಟು ಪಾಟೀಲ, ಕಿರಣ ಮಾನೆ, ದಾದಾಸೋ ಮಗದುಮ, ತಾನಾಜಿ ಮಾನೆ, ಕಿರಣ ಕೋಪರ್ಡೆ, ಸಾತಪ್ಪ ಖೋತ ಇತರರಿದ್ದರು.