ಜಿಲ್ಲೆ

ಬಕ್ರೀದ್‌ಗೆ ದನ ಬಲಿಕೊಟ್ಟ ಶಂಕೆ

ರುದ್ರಪ್ಪ ವಾಲಿ

ಕಂಪ್ಲಿ: ಬಕ್ರೀದ್ ಹಬ್ಬದ ಸಂಬಂಧ 18ನೇವಾರ್ಡ್ ಸುಣಗಾರ ಓಣಿಯ ಪೀರಲು ದೇವರು ಕೂಡಿಸುವ ಮಸೀದಿ ಮುಂದಿನ ಬಾವಿಯ ಪಕ್ಕದಲ್ಲಿ ದನವನ್ನು ಬಲಿಕೊಟ್ಟ ಮಾಹಿತಿ ಪೊಲೀಸರಿಗೆ ಶನಿವಾರ ಬೆಳಗ್ಗೆ ತಿಳಿದಿದ್ದರಿಂದ, ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಗಮನಿಸಿದಾಗ, ಅದೇ ತಾನೇ ಸಿಸಿ ಹಾಸುನೆಲವನ್ನು ತೊಳೆದಿದ್ದು, ಅಲ್ಲಿ ಮಾಂಸಖಂಡಗಳಾಗಲಿ, ಎಲುಬು ತುಂಡುಗಳಾಗಲಿ ಕಂಡು ಬಂದಿಲ್ಲ.

ಆದರೆ ಅಲ್ಲಲ್ಲಿ ನೆಲಕ್ಕೆ ರಕ್ತ ಅಂಟಿಕೊಂಡಂತೆ ಕಂಡಿದ್ದರಿಂದ ಪೊಲೀಸರು ಮುಂದಿನ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.