ಬೋರಗಾಂವ: ಸಮೀಪದ ಮಾಣಕಾಪುರ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ನಾಮದೇವ ಬನ್ನೆ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಜಿ.ಎಸ್.ಕುಲಕರ್ಣಿ ಘೋಷಿಸಿದರು.
ಇಲ್ಲಿನ ಸಂಘದ ಕಚೇರಿಯಲ್ಲಿ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಆಯ್ಕೆಯಾದರು. ನಾಮದೇವ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬೆಂಬಲಿಗರು ಹಾಗೂ ಸದಸ್ಯರು ಗುಲಾಲ ಎರಚಿ ಸಂಭ್ರಮಿಸಿದರು.
ಸಂಘದ ಸಿಇಓ ಪ್ರದೀಪಕುಮಾರ ರೂಗೆ, ದತ್ತಾತ್ರಯ ಪೂಜಾರಿ, ಉಪಾಧ್ಯಕ್ಷ ಅಮೋಲ ಮಾಳಿ, ದಗಡು ಕುಂಬಾರ, ದಿಗಂಬರ ಮಾನೆ, ಡಾ.ಪ್ರಭಾಕರ ಚವ್ಹಾಣ, ನೀತಾ ಪಾಟೀಲ, ರಾವಸಾಹೇಬ ಬತ್ತೆ, ಯೂನಸ್ ಮುಲ್ಲಾ, ಶ್ರೀಕಾಂತ ಕುಂಬಾರ, ವಿಜಯ ಮಾಳಿ, ಅಪ್ಪಾಸಾಹೇಬ ಬನ್ನೆ, ಅನಿಲ ಚೌಗುಲೆ, ಸಚಿನ ಮಾಳಿ, ಬಾಜಿರಾವ ಕೋಳಿ, ಶಂಕರ ಪೂಜಾರಿ, ಪ್ರಕಾಶ ಕರಡೆ ಇತರರು ಇದ್ದರು.